ಮಾಹೆ ಮಣಿಪಾಲ್‌ನ ಮರೇನಾದಲ್ಲಿ ಒಂದು ತಿಂಗಳ ಟೇಬಲ್ ಟೆನಿಸ್ ತರಬೇತಿ
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ವಿಶ್ವವಿದ್ಯಾಲಯ ಎಂದು ಪರಿಗಣಿತವಾಗಿರುವ ಉತ್ಕೃಷ್ಟ ಸಂಸ್ಥೆಯು ಶರತ್ ಕಮಲ್ ಅಕಾಡೆಮಿಯ ಸಹಯೋಗದಲ್ಲಿ ಮಣಿಪಾಲದ ಮರೇನಾ ಕ್ರೀಡಾ ಸಂಕೀರ್ಣದಲ್ಲಿ ಒಂದು ತಿಂಗಳ ಟೇಬಲ್ ಟೆನಿಸ್ ತರಬೇತಿ ಶಿಬಿರವನ್ನು ಆಯೋಜಿಸಿದೆ.
ಈ ಶಿಬಿರವು ಏಪ್ರಿಲ್ 10 ರಿಂದ ಮೇ 10 ರವರೆಗೆ ನಡೆಯಲಿದ್ದು, ಟೇಬಲ್ ಟೆನಿಸ್‌ನಲ್ಲಿ ಆಸಕ್ತಿಯಿರುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಉತ್ತಮ ತರಬೇತಿ ನೀಡುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ನುರಿತ ತರಬೇತುದಾರರ ಮಾರ್ಗದರ್ಶನದಲ್ಲಿ ತರಬೇತಿ ನಡೆಯಲಿದ್ದು, ವಿದ್ಯಾರ್ಥಿಗಳಲ್ಲಿ ಆಟದ ಕೌಶಲ ಮತ್ತು ಸ್ಪರ್ಧಾತ್ಮಕ ಮನೋಭಾವ ಬೆಳೆಸಲು ಇದು ಸಹಕಾರಿಯಾಗಲಿದೆ.
ಈ ತರಬೇತಿಯಲ್ಲಿ ಮಾಹೆಯ ವಿದ್ಯಾರ್ಥಿಗಳು, ಸಿಬ್ಬಂದಿ ಸೇರಿದಂತೆ ಕ್ರೀಡೆಯಲ್ಲಿ ಆಸಕ್ತಿಯಿರುವ ಯಾರು ಬೇಕಾದರೂ ಭಾಗವಹಿಸಬಹುದು. ಆರಂಭಿಕ ಹಂತದ ಆಟಗಾರರಿಂದ ಹಿಡಿದು ಅನುಭವಿಗಳವರೆಗೆ, ತಮ್ಮ ಆಟದ ತಂತ್ರ ಹಾಗೂ ಒಟ್ಟಾರೆ ಆಟದ ಶೈಲಿಯನ್ನು ಸುಧಾರಿಸಿಕೊಳ್ಳಲು ಇದೊಂದು ಉತ್ತಮ ಅವಕಾಶವಾಗಿದೆ.
ಸೀಮಿತ ಅವಕಾಶವಿರುವುದರಿಂದ ಆಸಕ್ತರು ಶೀಘ್ರ ಹೆಸರನ್ನು ನೋಂದಾಯಿಸಿಕೊಳ್ಳಬೇಕಿದೆ. ಈ ಶಿಬಿರದ ಕುರಿತು ಹೆಚ್ಚಿನ ಮಾಹಿತಿಗಾಗಿ ಮಾಹೆ ಕ್ರೀಡಾ ಮಂಡಳಿಯನ್ನು ಸಂಪರ್ಕಿಸಬಹುದು.
ಶಿಬಿರದ ವಿವರಗಳು:
ದಿನಾಂಕ: ಏಪ್ರಿಲ್ 10, 2026 ರಿಂದ ಮೇ 10, 2026
ಸ್ಥಳ: ಮರೆನಾ ಟೇಬಲ್ ಟೆನಿಸ್ ಕೋರ್ಟ್, ಮಣಿಪಾಲ್
ಅರ್ಹತೆ: ಟೆಬಲ್ ಟೆನ್ನಿಸ್ ಆಸಕ್ತರು (ಮಾಹೆ ಸಿಬ್ಬಂದಿ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು)
ನೋಂದಣಿ ಮತ್ತು ವಿಚಾರಣೆಗಾಗಿ ಡಾ. ರೆನ್ ಟ್ರೆವರ್ (9902537030) ಅವರನ್ನು ಸಂಪರ್ಕಿಸಿ.