-->
ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ

ಉಡುಪಿಯಲ್ಲಿ ಪೊಲೀಸ್ ಧ್ವಜ ದಿನಾಚರಣೆ


ಕರ್ನಾಟಕ ಪೊಲೀಸ್‌ ಧ್ವಜ ದಿನಾಚರಣೆ ಪ್ರಯುಕ್ತ ಉಡುಪಿ ಜಿಲ್ಲಾ ಪೊಲೀಸ್‌ ವತಿಯಿಂದ ಪೊಲೀಸ್‌ ಧ್ವಜ ದಿನಾಚರಣೆಯನ್ನು ಉಡುಪಿಯ ಚಂದು ಮೈದಾನದಲ್ಲಿ ಆಚರಿಸಲಾಯಿತು. 


ಪೊಲೀಸ್‌ ಧ್ವಜ ದಿನಾಚರಣೆಯ ಗೌರವ ವಂದನೆಯನ್ನು ನಿವೃತ್ತ ಮಹಿಳಾ ಪೊಲೀಸ್‌ ನಿರೀಕ್ಷಕಿ ಸುಜಾತ ಸಾಲಿಯಾನ್‌, ಇವರು ಸ್ವೀಕಾರ ಮಾಡಿದರು. ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಹರಿರಾಮ್‌ ಶಂಕರ್ , ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಸುಧಾಕರ ಎಸ್‌ ನಾಯ್ಕ್‌ ಇವರು ಹಾಜರಿದ್ದರು. 


ಇದೇ ಸಮಯದಲ್ಲಿ 2025-26ನೇ ಸಾಲಿನಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳಿಂದ ವೈದ್ಯಕೀಯ ಧನ ಸಹಾಯಕ್ಕಾಗಿ ಸ್ವೀಕರಿಸಲಾದ ಅರ್ಜಿಗಳಲ್ಲಿ 13,08,050  ರೂ ವೈದ್ಯಕೀಯ ಧನ ಸಹಾಯವನ್ನು ವಿತರಿಸಲಾಯಿತು. 

ಪಥಸಂಚಲನದ ನೇತೃತ್ವವನ್ನು ಆರ್‌ಪಿಐ ರವಿ ಕುಮಾರ್‌  ವಹಿಸಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಯೋಗೀಶ್‌ ನಾಯ್ಕ ಇವರು ನಿರ್ವಹಿಸಿ ದರು. ಜಿಲ್ಲೆಯ ಎಲ್ಲಾ ಪೊಲೀಸ್‌ ಅಧಿಕಾರಿಗಳು ಹಾಗೂ ನಿವೃತ್ತ ಪೊಲೀಸ್‌ ಅಧಿಕಾರಿ, ಸಿಬ್ಬಂಧಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.







Ads on article

Advertise in articles 1

advertising articles 2

Advertise under the article