-->
3 ತಿಂಗಳ ಮಗುವಿಗೆ ಹುಲಿವೇಷ ತೊಡಿಸಿ ಸಂಭ್ರಮಿಸಿದ  ಹೆತ್ತವರು

3 ತಿಂಗಳ ಮಗುವಿಗೆ ಹುಲಿವೇಷ ತೊಡಿಸಿ ಸಂಭ್ರಮಿಸಿದ ಹೆತ್ತವರು


ಉಡುಪಿ ಶ್ರೀ ಕೃಷ್ಣ ಅಷ್ಟಮಿ ಸಂಭ್ರಮದ ನಡುವೆ ಮೂರು ತಿಂಗಳ ಪುಟ್ಟ ಮಗು ಹರ್ಷಿವ್‌ಗೆ ಹುಲಿವೇಷ ತೊಡಿಸಿ ಹೆತ್ತವರು ಸಂಭ್ರಮಿಸಿದ ಅಪರೂಪದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.


ಉಡುಪಿಯ ಕೃಷ್ಣ ಅಷ್ಟಮಿ ಆಚರಣೆಯ ಸಂಭ್ರಮದ ಸಂದರ್ಭದಲ್ಲಿ ಪುಟ್ಟ ಹರ್ಷಿವ್‌ಗೆ ಆಕರ್ಷಕ ಹುಲಿವೇಷ ತೊಡಿಸಲಾಗಿತ್ತು. ಹುಲಿವೇಷಧಾರಿಗಳು ಮಗುವನ್ನು ಕೈಯಲ್ಲಿ ಎತ್ತಿಕೊಂಡು ಕುಣಿದು ಸಂಭ್ರಮಿಸಿದ ದೃಶ್ಯ ನೆರೆದಿದ್ದವರ ಗಮನ ಸೆಳೆಯಿತು.

ಪುಟ್ಟ ಮಗುವಿನ ಹುಲಿವೇಷ ಹಾಗೂ ಅದರೊಂದಿಗೆ ಹುಲಿವೇಷಧಾರಿಗಳ ಸಂಭ್ರಮದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಕೃಷ್ಣ ಅಷ್ಟಮಿ ಸಂಭ್ರಮಕ್ಕೆ ಈ ಪುಟ್ಟ ಹುಲಿ ವಿಶೇಷ ಮೆರುಗು ನೀಡಿದೆ.

Ads on article

Advertise in articles 1

advertising articles 2

Advertise under the article