-->
 ಹೆಬ್ರಿ ತಾಲೂಕಿನಲ್ಲಿ ಕಾಡಾನೆ ದಾಳಿ; ಕೃಷಿ ತೋಟಗಳಿಗೆ ಹಾನಿ

ಹೆಬ್ರಿ ತಾಲೂಕಿನಲ್ಲಿ ಕಾಡಾನೆ ದಾಳಿ; ಕೃಷಿ ತೋಟಗಳಿಗೆ ಹಾನಿ


ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ನಾಡ್ಪಾಲು ಹಾಗೂ ಪೀತಬೈಲು ಎಂಬಲ್ಲಿ ಕಾಡಾನೆಗಳು ತೋಟಗಳಿಗೆ ನುಗ್ಗಿ ಹಾನಿಗೊಳಿಸಿವೆ. 

ನಾಡ್ಪಾಲು ಗ್ರಾಮದ ತೆಂಗುಮಾರ್ ಲಕ್ಷ್ಮಣ ಗೌಡ, ಆನಂದ ಗೌಡ ಹಾಗೂ ಪೀತಬೈಲು ಜಯಂತ ಗೌಡ ಎಂಬವರ ತೋಟಗಳಿಗೆ ದಾಳಿ ನಡೆಸಿ ಅಡಿಕೆ ಮರಗಳು, ಬಾಳೆ ಗಿಡಗಳು ಸೇರಿದಂತೆ ಹಲವು ಬೆಳೆಗಳನ್ನು ನಾಶ ಮಾಡಿದೆ.

ರಾತ್ರೋರಾತ್ರಿ ಕಬ್ಬಿನಾಲೆ ಭಾಗಗಳಲ್ಲಿ ಆನೆ ತೋಟಗಳಿಗೆ ದಾಳಿ ನಡೆಸುತ್ತಿರುವುದರಿಂದ ಮಲೆನಾಡು ಪ್ರದೇಶದ ಕುಟುಂಬಗಳು ತೊಂದರೆಗೆ ಒಳಗಾಗಿವೆ. ರಾತ್ರಿ ಹೊತ್ತಿನಲ್ಲಿ ಸಂಚರಿಸುವುದಕ್ಕೂ ಜನರು ಆತಂಕ ಪಡುತ್ತಿದ್ದಾರೆ. ಗುಡ್ಡಗಾಡು ಪ್ರದೇಶಗಳಲ್ಲಿ ಹಲಸು ಮತ್ತು ಮಾವಿನ  ಋತುವಿನ ವೇಳೆ ಆನೆಗಳು ಹೆಚ್ಚು ಸಂಚರಿಸುತ್ತಿವೆ. ಕಬ್ಬಿನಾಲೆ ಪ್ರದೇಶದ ವಾಲಿಕುಂಜ ಗುಡ್ಡದ ಮೇಲ್ಭಾಗದಲ್ಲಿ  ಕಾಡಾನೆ ಕಾಣಿಸಿಕೊಂಡಿದ್ದು, ಗೇಮ್ ರೋಡ್ ಮೂಲಕ ಮಲೆನಾಡಿನ ತಪ್ಪಲು ಪ್ರದೇಶಗಳಾದ ಕಬ್ಬಿನಾಲೆ, ನಾಡ್ಪಾಲು, ಚಾರ, ವರಂಗ, ಅಂಡಾರು ಹಾಗೂ ಕಾರ್ಕಳ ತಾಲೂಕಿನ ಶಿರ್ಲಾಲು, ಕೆರುವಾಶೆ ಭಾಗಗಳಲ್ಲಿ ಸಂಚರಿಸುತ್ತಿದೆ. 

Ads on article

Advertise in articles 1

advertising articles 2

Advertise under the article