ಬ್ಯಾಡ್ಮಿಂಟನ್ ತಾರೆ ಕಾರ್ಕಳದ ಆಯುಷ್ ಶೆಟ್ಟಿಗೆ ಸಿಎಂ ಅಭಿನಂದನೆ
Thursday, April 16, 2026
ಬ್ಯಾಡ್ಮಿಂಟನ್ ಏಷ್ಯಾ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿ ಗೆದ್ದ ಮೊದಲ ಭಾರತೀಯ ಕಾರ್ಕಳದ ಸಾಣೂರು ನಿವಾಸಿ ಆಯುಷ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದ ಕಚೇರಿಯಲ್ಲಿ ಅಭಿನಂದಿಸಿ ಶಾಲು ಹಾಕಿ ಗೌರವಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವಿಜಯಕುಮಾರ್ ಸೊರಕೆ, ಮಾಜಿ ಸಂಸದ ಜಯಪ್ರಕಾಶ್ ಹೆಗ್ಡೆ, ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಆಯುಶ್ ಶೆಟ್ಟಿಯವರ ತಂದೆ ರಾಮ ಪ್ರಕಾಶ್ ಶೆಟ್ಟಿ, ತಾಯಿ ಶಾಲ್ಮಲಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
20 ವರ್ಷದ 6 ಫೀಟ್ 4 ಇಂಚ್ ಎತ್ತರದ ಆಯುಶ್ ಶೆಟ್ಟಿಯವರು ಚೀನಾದ ನಿಂಗೋದಲ್ಲಿ ನಡೆದ ಪಂದ್ಯಾಟದಲ್ಲಿ ವಿಶ್ವದ ನಂ.1 ಆಟಗಾರ ಕುನಾವುತ್ ವಿಟಿಡ್ನರ್ನ್ ಅವರನ್ನು ಸೋಲಿಸಿ ಫೈನಲ್ ಪ್ರವೇಶಗೈದು 61 ವರ್ಷದ ಬಳಿಕ ಭಾರತಕ್ಕೆ ಬೆಳ್ಳಿ ಪದಕದ ಸಾಧನೆ ಮಾಡಿದ್ದರು.