-->
ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ವೈಭವದ ಹೊರೆಕಾಣಿಕೆ ಸಮರ್ಪಣೆ

ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇಗುಲಕ್ಕೆ ವೈಭವದ ಹೊರೆಕಾಣಿಕೆ ಸಮರ್ಪಣೆ

 

ಏ.16 ರಿಂದ 20 ವರೆಗೆ ಉಡುಪಿಯ ಬನ್ನಂಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಅಷ್ಟಬಂಧ, ಬ್ರಹ್ಮಕಲಶೋತ್ಸವ ಪ್ರಯುಕ್ತ ಇಂದು ವೈಭವದ ಹಸಿರು ಹೊರೆಕಾಣಿಕೆಯನ್ನು ದೇಗುಲಕ್ಕೆ ಸಮರ್ಪಿಸಲಾಯಿತು.

                      (Photo: Surabhi Rathan)
ಉಡುಪಿಯ ಜೋಡುಕಟ್ಟೆ ಸಮೀಪ ಹೊರೆಕಾಣಿಕೆ ಮೆರವಣಿಗೆಗೆ ಅದ್ದೂರಿಯ ಚಾಲನೆ ದೊರಕಿತು. ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ವಾಸುದೇವ ಉಪಾಧ್ಯ  ಅವರು ಪೂಜಾ ವಿಧಿ ವಿಧಾನ ನೆರವೇರಿಸಿದ ಬಳಿಕ ಗಣ್ಯರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು. 

ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಸಲಹೆಗಾರ ಡಾ. ಜಿ. ಶಂಕರ್ , ಭುವನೇಂದ್ರ ಕಿದಿಯೂರು, ಪ್ರಸಾದ್‌ರಾಜ್ ಕಾಂಚನ್, ಪುರುಷೋತ್ತಮ ಶೆಟ್ಟಿ, ಗಣನಾಥ್ ಹೆಗ್ಡೆ, ಮಾಧವ ಬನ್ನಂಜೆ, ರಮೇಶ ಕಾಂಚನ್, ಹರಿಯಪ್ಪ ಕೋಟ್ಯಾನ್ ಸಹಿತ ಹಲವು ಗಣ್ಯರು ಭಾಗಿಯಾಗಿದ್ದರು. 

ಹುಲಿ ಕುಣಿತ, ವಿವಿಧ ಭಜನಾ ತಂಡಗಳು, ಆಕರ್ಷಕ ಟ್ಯಾಬ್ಲೋ ಗಳು ಮೆರವಣಿಗೆಯುದ್ದಕ್ಕೂ ಮೆರುಗು ಹೆಚ್ಚಿಸಿದವು. ಜೋಡುಕಟ್ಟೆಯಿಂದ ಸರ್ವಿಸ್ ಬಸ್ ನಿಲ್ದಾಣವಾಗಿ ಕ್ಷೇತ್ರಕ್ಕೆ ಮೆರವಣಿಗೆ ಸಾಗಿ ಬಂತು.

250 ಕ್ಕೂ ಅಧಿಕ ವಾಹನಗಳಲ್ಲಿ ದವಸ ಧಾನ್ಯಗಳು ಹಾಗು ತರಕಾರಿಗಳನ್ನು ದೇಗುಲಕ್ಕೆ ಅರ್ಪಿಸಲಾಯಿತು.








Ads on article

Advertise in articles 1

advertising articles 2

Advertise under the article