ಹೇರಾಡಿ ಶ್ರೀ ಆದಿಶೇಷನಾಗ ಸನ್ನಿಧಿ ವಾರ್ಷಿಕೋತ್ಸವದಲ್ಲಿ ಬ್ರಹ್ಮಾವರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಸನ್ಮಾನಿಸಲಾಯಿತು. ಹೇರಾಡಿಯ ಮಂಜುನಾಥ ರಾವ್ ಎನ್ನುವವರ ಮನೆಯಲ್ಲಿ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಪ್ರಕರಣವನ್ನು ಬೇಧಿಸಿದ ಬ್ರಹ್ಮಾವರ ಠಾಣಾ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು.