-->
ಭಟ್ಕಳ ತಟ್ಟೆಹಕ್ಕಲು ನದಿ ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ

ಭಟ್ಕಳ ತಟ್ಟೆಹಕ್ಕಲು ನದಿ ದುರಂತ: ಮೃತರ ಸಂಖ್ಯೆ 11ಕ್ಕೆ ಏರಿಕೆ


ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ತಟ್ಟೆಹಕ್ಕಲು ನದಿಯಲ್ಲಿ ಸಂಭವಿಸಿದ ಭೀಕರ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಇದೀಗ 11ಕ್ಕೆ ಏರಿಕೆಯಾಗಿದೆ. 

ಭಾನುವಾರ 10 ಮಂದಿಯ ಮೃತದೇಹ ಪತ್ತೆಯಾಗಿದ್ದರೆ, ಇಂದು ಮತ್ತೊಬ್ಬರ ಶವ ಪತ್ತೆಯಾಗಿದೆ. ನಾಪತ್ತೆಯಾಗಿದ್ದವರಿಗಾಗಿ ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳ ಹಾಗೂ ಸ್ಥಳೀಯ ಮೀನುಗಾರರು ಶೋಧ ಕಾರ್ಯಾಚರಣೆ ಮುಂದುವರೆಸಿದ್ದರು. ಇಂದು ಬೆಳಿಗ್ಗೆ 8 ಗಂಟೆಯಿಂದಲೇ ಎನ್‌ಡಿಆರ್‌ಎಫ್ ತಂಡ ಶೋಧ ಕಾರ್ಯಾಚರಣೆ ಆರಂಭಿಸಿತು. ಈ ವೇಳೆ ಕಾಣೆಯಾಗಿದ್ದ ಮಾದೇವ್ ನಾಯ್ಕ್ ಅವರ ಮೃತದೇಹ ನದಿಯ ಅಳವೆಯಲ್ಲಿ ಪತ್ತೆಯಾಯಿತು.ನದಿಯ ನೀರಿನಲ್ಲಿ ಕಾಣೆಯಾಗಿದ್ದವರ ಶವಗಳನ್ನು ಪತ್ತೆ ಹಚ್ಚಲು ಮುಳುಗು ತಜ್ಞರು, ಎನ್‌ಡಿಆರ್‌ಎಫ್ ಸಿಬ್ಬಂದಿ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಪ್ರತ್ಯೇಕವಾಗಿ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಮೀನುಗಾರರೂ ಶೋಧ ಕಾರ್ಯದಲ್ಲಿ ಸಹಕರಿಸಿದರು.

Ads on article

Advertise in articles 1

advertising articles 2

Advertise under the article