-->
ಕೊಡವೂರು ಮಹಾರುದ್ರ ಯಾಗ: ಮೇ. 14ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ

ಕೊಡವೂರು ಮಹಾರುದ್ರ ಯಾಗ: ಮೇ. 14ರಂದು ಹಸಿರು ಹೊರೆಕಾಣಿಕೆ ಮೆರವಣಿಗೆ


ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದಲ್ಲಿ ಪ್ರಸಾದ್ ರಾಜ್ ನೇತೃತ್ವದಲ್ಲಿ ನಡೆಯಲಿರುವ ಮಹಾರುದ್ರ ಯಾಗದ ಪ್ರಯುಕ್ತ ಮೇ 14ರಂದು ಹಸಿರು ಹೊರೆ ಕಾಣಿಕೆ ಸಮರ್ಪಣೆಯಾಗಲಿದೆ. 

ಮೇ 14ರಂದು ಸಂಜೆ 4 ಗಂಟೆಗೆ  ಮಲ್ಪೆ ಅಯ್ಯಪ್ಪ ಮಂದಿರದ ಬಳಿ ಉಡುಪಿ ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಶ್ರೀಪಾದರು ಭವ್ಯ ಹೊರೆಕಾಣಿಕೆ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಮಲ್ಪೆಯಿಂದ ಕೊಡವೂರು ದೇವಸ್ಥಾನವರೆಗೆ ಭವ್ಯ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ. ಮೇ.  14ರಂದು ರಾತ್ರಿ 8 ಗಂಟೆಯಿಂದ ಕೃಷ್ಣ ಕಲಾವಿದರು ಕಿನ್ನಿಮುಲ್ಕಿ ಇವರಿಂದ ಆನಿದ ಮನದಾನಿ ತುಳು ಹಾಸ್ಯಮಯ ನಾಟಕ ನಡೆಯಲಿದೆ.  

Ads on article

Advertise in articles 1

advertising articles 2

Advertise under the article