15 ವರ್ಷ ವಯೋಮಿತಿಯ “ಅಕ್ಷಯ ಟಿ-20 ಕಪ್– 2026”
Saturday, May 02, 2026
ಅಕ್ಷಯ ಕ್ರಿಕೆಟ್ ಅಕಾಡೆಮಿ ಉಡುಪಿ ವತಿಯಿಂದ, ಉಡುಪಿ ಕ್ರಿಕೆಟ್ ಅಸೋಸಿಯೇಷನ್ ಉಡುಪಿ ಹಾಗೂ ಸನ್‌ರೈಸ್ ಕ್ರಿಕೆಟ್ ಅಕಾಡೆಮಿ ರಂಗನಪಲ್ಕೆ ಇವರ ಸಹಭಾಗಿತ್ವದಲ್ಲಿ, ಮಟ್ಟು ಅಸೋಸಿಯೇಟ್ಸ್, ಉಡುಪಿ ಅವರ ಸಹಕಾರದೊಂದಿಗೆ, ಕೌಡೂರು ಸ್ಟೇಡಿಯಂ, ಗ್ಲಾರಿಡ ಎಸ್ಟೇಟ್ ರಂಗನಪಲ್ಕೆ ಇದರ ಮೈದಾನದಲ್ಲಿ 15 ವರ್ಷ ವಯೋಮಿತಿಯ “ಅಕ್ಷಯ ಟಿ-20 ಕಪ್ – 2026” ಲೆದರ್ ಬಾಲ್ ಪಂದ್ಯಾವಳಿಗೆ ಭವ್ಯ ಚಾಲನೆ ದೊರೆಯಿತು.
ಉಡುಪಿ ಜಿಲ್ಲೆಯ ಪ್ರಮುಖ 6 ತಂಡಗಳು ಭಾಗವಹಿಸುತ್ತಿರುವ ಈ ಕೂಟದಲ್ಲಿ, ಶುಕ್ರವಾರ ನಡೆದ ‘A’ ಗುಂಪಿನ ಅರ್ಹತಾ ಸುತ್ತಿನಲ್ಲಿ ಅಕ್ಷಯ ಕ್ರಿಕೆಟ್ ಅಕಾಡೆಮಿ, ಉಡುಪಿ ಹಾಗೂ ಕೆ.ಆರ್.ಎಸ್ ಕಟಪಾಡಿ ತಂಡಗಳು ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನಗಳನ್ನು ಪಡೆದು ಸೆಮಿ ಫೈನಲ್‌ಗೆ ಅರ್ಹತೆ ಪಡೆದಿವೆ.
ಉದ್ಘಾಟನಾ ಸಮಾರಂಭದಲ್ಲಿ ಸಂಯೋಜಕರೂ ಹಿರಿಯ ತರಬೇತುದಾರರಾದ ಸದಾನಂದ ಶಿರ್ವ, ದಯಾನಂದ ಬಂಗೇರ, ಉದಯ ಕಟಪಾಡಿ, ಉಡುಪಿಯ ಖ್ಯಾತ ವಕೀಲರಾದ ಗಣೇಶ್ ಮಟ್ಟು, ಯುಡಿಸಿಎ ಕಾರ್ಯದರ್ಶಿ ರೆನ್ ಟ್ರೇವೊರ್ ಡಯಾಸ್ ಹಾಗೂ ಇನ್ನಿತರ ಸ್ಥಳೀಯ ಗಣ್ಯರು ಉಪಸ್ಥಿತರಿದ್ದರು.
ಇಂದು ‘B’ ಗುಂಪಿನ ಪಂದ್ಯಗಳಲ್ಲಿ ಎಚ್‌ಜೆಸಿ ಕ್ರಿಕೆಟ್ ಅಕಾಡೆಮಿ ಶಿರ್ವ, ಬಾ.ಕಾ. ಬ್ರಹ್ಮಾವರ ಹಾಗೂ ಅಕ್ಷಯ ‘B’ ತಂಡಗಳು ಸೆಣಸಲಿವೆ. ಭಾನುವಾರ ಸೆಮಿ ಫೈನಲ್ ಮತ್ತು ಫೈನಲ್ ಪಂದ್ಯಗಳು ನಡೆಯಲಿವೆ.
.jpeg)
