-->
ಉಪಾಹಾರ ಕೂಟದಲ್ಲಿ ಸಿಎಂ ಸಿದ್ದು- ಡಿಸಿಎಂ ಡಿಕೆಶಿ ಪರಸ್ಪರ ಆಲಿಂಗನ

ಉಪಾಹಾರ ಕೂಟದಲ್ಲಿ ಸಿಎಂ ಸಿದ್ದು- ಡಿಸಿಎಂ ಡಿಕೆಶಿ ಪರಸ್ಪರ ಆಲಿಂಗನ


ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಇಂದು ಕಾವೇರಿ ನಿವಾಸವು  ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಪರಸ್ಪರ ಆಲಿಂಗನ ಮೂಲಕ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.


ಉಪಹಾರ ಕೂಟದಲ್ಲಿ ಭಾಗವಹಿಸಲು ಆಗಮಿಸಿದ ಡಿಸಿಎಂ ಡಿಕೆ ಶಿವಕುಮಾರ್ ಅವರು ಸಿಎಂ ಸಿದ್ಸರಾಮಯ್ಯ ಅವರ ಕಾಲಿಗೊರಗಿ ನಮಸ್ಕರಿಸಿದರು. ಬಳಿಕ ಉಭಯ ನಾಯಕರೂ ಪರಸ್ಪರ ಆಲಿಂಗಿಸಿಕೊಂಡ ಅಪರೂಪದ ದೃಶ್ಯಗಳು ವೈರಲ್ ಆಗಿವೆ.

ಉಪಾಹಾರ ಕೂಟದಲ್ಲಿ ಬಹುತೇಕ ಸಚಿವ ಸಂಪುಟದ ಸಚಿವರು, ಸಿಎಂ ಆಪ್ತರು ಭಾಗವಹಿಸಿದ್ದರು. ಉಪಾಹಾರ ಕೂಟ ಆರಂಭವಾಗುವ ಮುನ್ನ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರು  ಮನೆಯೊಳಗಿನ ಪ್ರತ್ಯೇಕ ಕೊಠಡಿಯೊಂದರಲ್ಲಿ ಕೇವಲ ಇಬ್ಬರೇ ಸುದೀರ್ಘ ಮಾತುಕತೆ ನಡೆಸಿದ್ದಾರೆ. 

Ads on article

Advertise in articles 1

advertising articles 2

Advertise under the article