-->
ಕೇರಳ ಸಮಾಜಂ ಮಹಾಸಭೆ: ವಾರ್ಷಿಕ ವರದಿ, ಲೆಕ್ಕಪತ್ರ ಅನುಮೋದನೆ

ಕೇರಳ ಸಮಾಜಂ ಮಹಾಸಭೆ: ವಾರ್ಷಿಕ ವರದಿ, ಲೆಕ್ಕಪತ್ರ ಅನುಮೋದನೆ


ಕೇರಳ ಸಮಾಜಂ (ರಿ) ಉಡುಪಿ ಇದರ ವಾರ್ಷಿಕ ಮಹಾಸಭೆಯು ಭಾನುವಾರ ಅಂಬಾಗಿಲಿನ ಅಮೃತ ಗಾರ್ಡನ್‌ನಲ್ಲಿ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಂಘದ 2025–26ನೇ ಸಾಲಿನ ಕಾರ್ಯಚಟುವಟಿಕೆಗಳ ವರದಿಯನ್ನು ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಮಂಡಿಸಿದರು. ಇದೇ ಸಾಲಿನ ಲೆಕ್ಕ ಪರಿಶೋಧಕರಿಂದ ಅಂಗೀಕರಿಸಲ್ಪಟ್ಟ ವಾರ್ಷಿಕ ಲೆಕ್ಕಪತ್ರಗಳನ್ನು ಖಜಾಂಚಿ ರಮೇಶ್ ಇ.ಪಿ. ಸಭೆಯ ಮುಂದಿಟ್ಟರು.


ಅಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ಸಂಘವು ಕೈಗೊಂಡಿರುವ ವಿವಿಧ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಕುರಿತು ಮಾಹಿತಿ ನೀಡಿದರು. ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಲಿರುವ ಕಾರ್ಯಕ್ರಮಗಳು ಮತ್ತು ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು. 

ಇಂದಿರಾ ಸಂತೋಷ್ ಪ್ರಾರ್ಥಿಸಿದರು‌. ನಿರ್ಮಲ್ಜಿತ್ ಸ್ವಾಗತಿಸಿದರು.ಮೋಬಿ ವಂದಿಸಿದರು. ಶ್ರೀದೇವಿ ಅರುಣ್ ಕಾರ್ಯಕ್ರಮ ನಿರೂಪಿಸಿದರು. ಮಹಾಸಭೆಯಲ್ಲಿ ಸಮಾಜದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

Ads on article

Advertise in articles 1

advertising articles 2

Advertise under the article