-->
ನೇಕಾರ ಮುಖಂಡ ಕೆ. ಸಂಜೀವ ಶೆಟ್ಟಿಗಾರ್ ನಿಧನ

ನೇಕಾರ ಮುಖಂಡ ಕೆ. ಸಂಜೀವ ಶೆಟ್ಟಿಗಾರ್ ನಿಧನ


ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಇದರ ಅಧ್ಯಕ್ಷರು, ಅನುಭವಿ ನೇಕಾರರು, ಕೊರಂಗ್ರಪಾಡಿ ನಿವಾಸಿ  ಕೆ ಸಂಜೀವ ಶೆಟ್ಟಿಗಾರ (86) ಇವರು ಅಲ್ಪ ಕಾಲದ ಅನಾರೋಗ್ಯದಿಂದ ಇಂದು ನಿಧನರಾದರು. 

ನೇಯ್ಗೆ ಕೆಲಸಗಾರರ ಯೂನಿಯನ್ ರಚಿಸಿ, ನೇಕಾರರ ಒಳಿತಿಗಾಗಿ ಹೋರಾಟ ಮಾಡಿದ್ದ ಸಂಜೀವ ಶೆಟ್ಟಿಗಾರ್ ಕಳೆದ 31 ವರ್ಷಗಳಿಂದ ಶಿವಳ್ಳಿ ಪ್ರಾಥಮಿಕ ನೇಕಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ನೇಕಾರಿಕೆಯ ಸೇವೆಯನ್ನು ಪರಿಗಣಿಸಿ ಅನೇಕ ಸಂಘ-ಸಂಸ್ಥೆಗಳು ಇವರನ್ನು ಗುರುತಿಸಿ, ಅಭಿನಂದಿಸಿ, ಸನ್ಮಾನಿಸಿರುತ್ತಾರೆ. ಮೃತರು ಪತ್ನಿ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

Ads on article

Advertise in articles 1

advertising articles 2

Advertise under the article