-->
ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್  ಅಧ್ಯಕ್ಷರಾಗಿ ಸಿಂಥಿಯಾ ಡಿಸೋಜಾ ಅಯ್ಕೆ

ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್ ಅಧ್ಯಕ್ಷರಾಗಿ ಸಿಂಥಿಯಾ ಡಿಸೋಜಾ ಅಯ್ಕೆ


ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್‌ನ 2026-27ನೇ ಸಾಲಿನ ಅಧ್ಯಕ್ಷರಾಗಿ ಸಿಂಥಿಯಾ ಡಿಸೋಜಾ, ಕಾರ್ಯದರ್ಶಿಯಾಗಿ  ರೀನಾ ಡಿಸೋಜ ಹಾಗೂ ಕೋಶಾಧಿಕಾರಿಯಾಗಿ ಅನಿತಾ ಮೆಂಡೋನ್ಕಾ ಅವರು ಅಧಿಕಾರ ಸ್ವೀಕರಿಸಿದರು.

ಪದಗ್ರಹಣ ಅಧಿಕಾರಿಯಾಗಿ ಹೃಷಿಕೇಶ್ ಹೆಗ್ಡೆ ಅವರು ಕಾರ್ಯನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪ್ರಾಂತಿಯ ಅಧ್ಯಕ್ಷ ಲೂಯಿಸ್ ಲೋಬೊ ಹಾಗೂ ವಲಯ ಅಧ್ಯಕ್ಷೆ ಲವೀನಾ ಅನಿತಾ ಬರ್ಬೋಜ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ನೂತನ ಪದಾಧಿಕಾರಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಮೂವರು ಹೊಸ ಸದಸ್ಯರು ಲಯನ್ಸ್ ಕ್ಲಬ್ ಬಂಟಕಲ್ ಜಾಸ್ಮಿನ್‌ಗೆ ಸೇರ್ಪಡೆಗೊಂಡು ಸದಸ್ಯತ್ವ ಸ್ವೀಕರಿಸಿದರು.

ಪದಗ್ರಹಣ ಸಮಾರಂಭದ ಅಂಗವಾಗಿ ಕ್ಲಬ್ ವತಿಯಿಂದ ಹಲವು ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಆಕಸ್ಮಿಕವಾಗಿ ಕಾಲು ಕಳೆದುಕೊಂಡ ರೋಷನ್ ಡಿಸೋಜ ಅವರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.10,000 ಆರ್ಥಿಕ ನೆರವು ನೀಡಲಾಯಿತು. ಇತ್ತೀಚೆಗೆ ಬ್ರೈನ್ ಸ್ಟ್ರೋಕ್‌ನಿಂದ ನಿಧನರಾದ ಮಹಿಳೆಯ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ರೂ.10,000 ಸಹಾಯಧನ ವಿತರಿಸಲಾಯಿತು. ನಾಗರಿಕ ಸಮಿತಿ ಬಂಟಕಲ್‌ನ ಆಂಬುಲೆನ್ಸ್‌ನ ವಾರ್ಷಿಕ ವಿಮೆಗಾಗಿ ರೂ.15,000 ನೆರವು ನೀಡಲಾಯಿತು.

ಅಲ್ಲದೆ, 27 ಬಾರಿ ರಕ್ತದಾನ ಮಾಡಿದ ಅನಿತಾ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಬಂಟಕಲ್ ಶ್ರೀ ದುರ್ಗಾಪರಮೇಶ್ವರಿ ಶಾಲೆಯ ವಿದ್ಯಾರ್ಥಿನಿ ಕು. ಖುಷಿ ಅವರಿಗೆ ಪ್ರತಿಭಾ ಪ್ರೋತ್ಸಾಹಧನ ವಿತರಿಸಲಾಯಿತು.

 

Ads on article

Advertise in articles 1

advertising articles 2

Advertise under the article