ಲಯನ್ಸ್ ವಲಯಾಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿ ಆಯ್ಕೆ
Tuesday, June 30, 2026
ಲಯನ್ಸ್ ಜಿಲ್ಲೆ 317 ಸಿಯ ರೀಜನ್ 4, ವಲಯ 1ರ 2026–27ನೇ ಸಾಲಿನ ವಲಯಾಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿ ಆಯ್ಕೆಯಾಗಿದ್ದಾರೆ.
ಪೂರ್ಣಿಮಾ ಶೆಟ್ಟಿಯವರು ಲಯನ್ಸ್ ಕ್ಲಬ್ ಮಣಿಪಾಲ್ ಯುಕ್ತಿಯ ಸಕ್ರಿಯ ಸದಸ್ಯೆಯಾಗಿದ್ದು, ಈ ಹಿಂದೆ ಕ್ಲಬ್‌ನ ಅಧ್ಯಕ್ಷರಾಗಿ ಹಾಗೂ ಕಾರ್ಯದರ್ಶಿಯಾಗಿ ಯಶಸ್ವಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಂಘಟನಾ ಚಟುವಟಿಕೆಗಳಲ್ಲಿ ಅವರ ಸಕ್ರಿಯ ಭಾಗವಹಿಸುವಿಕೆ ಮತ್ತು ನಾಯಕತ್ವದ ಅನುಭವವನ್ನು ಪರಿಗಣಿಸಿ ಈ ಮಹತ್ವದ ಜವಾಬ್ದಾರಿಯನ್ನು ಅವರಿಗೆ ವಹಿಸಲಾಗಿದೆ.
ವಲಯ 1ರ ವ್ಯಾಪ್ತಿಯಲ್ಲಿ ಲಯನ್ಸ್ ಕ್ಲಬ್ ಮಣಿಪಾಲ್ ಯುಕ್ತಿ, ಉಡುಪಿ ಇಂದ್ರಾಳಿ, ಉಡುಪಿ ಸಮೃದ್ಧಿ ಹಾಗೂ ಉಡುಪಿ ಬನ್ನಂಜೆ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಸೇವಾ ಚಟುವಟಿಕೆಗಳಿಗೆ ವಲಯಾಧ್ಯಕ್ಷರಾಗಿ ಪೂರ್ಣಿಮಾ ಶೆಟ್ಟಿಯವರು ಮಾರ್ಗದರ್ಶನ ನೀಡಲಿದ್ದಾರೆ.
ಅವರ ಆಯ್ಕೆಗೆ ಲಯನ್ಸ್ ಜಿಲ್ಲೆಯ ಪದಾಧಿಕಾರಿಗಳು ಹಾಗೂ ವಿವಿಧ ಕ್ಲಬ್‌ಗಳ ಸದಸ್ಯರು ಅಭಿನಂದನೆ ಸಲ್ಲಿಸಿ, ಅವರ ಅವಧಿಯಲ್ಲಿ ಇನ್ನಷ್ಟು ಪರಿಣಾಮಕಾರಿ ಸೇವಾ ಕಾರ್ಯಗಳು ನಡೆಯಲಿ ಎಂದು ಶುಭ ಹಾರೈಸಿದ್ದಾರೆ.