ಲಯನ್ಸ್ ವಲಯಾಧ್ಯಕ್ಷರಾಗಿ ಡಾ. ನಿಶಾಂತ್ ಭಟ್ ಅಧಿಕಾರ ಸ್ವೀಕಾರ
Tuesday, June 30, 2026
2026-27 ನೇ ಸಾಲಿನ ಪ್ರಾಂತ್ಯ 4ರ ವಲಯ 2ರ ವಲಯಾಧ್ಯಕ್ಷರಾಗಿ ಡಾ.ನಿಶಾಂತ್ ಭಟ್ ಅವರು ಅಧಿಕಾರ ಸ್ವೀಕರಿಸಿದರು.
ವಲಯ 2ರ ವ್ಯಾಪ್ತಿಯಲ್ಲಿ ಮಣಿಪಾಲ, ಉಡುಪಿ ಸೆಂಟ್ರಲ್, ಉಡುಪಿ ಸೌತ್ ಹಾಗೂ ಅಂಬಲಪಾಡಿ ಲಯನ್ಸ್ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿವೆ. ನೂತನ ವಲಯಾಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಡಾ. ನಿಶಾಂತ್ ಭಟ್ ಅವರು ಎಲ್ಲಾ ಕ್ಲಬ್‌ಗಳ ಸಹಕಾರದೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಸಂಕಲ್ಪ ವ್ಯಕ್ತಪಡಿಸಿದರು.