-->
 ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷರಾಗಿ ಕಿರಣ್‌ರಾಜ್ ಪೂಂಜರೆಕೋಡಿ ಆಯ್ಕೆ

ಯುವವಾಹಿನಿ ಬಂಟ್ವಾಳ ಘಟಕ ಅಧ್ಯಕ್ಷರಾಗಿ ಕಿರಣ್‌ರಾಜ್ ಪೂಂಜರೆಕೋಡಿ ಆಯ್ಕೆ


ಯುವವಾಹಿನಿ ಬಂಟ್ವಾಳ ಘಟಕದ 2026-27ನೇ ಸಾಲಿನ ಅಧ್ಯಕ್ಷರಾಗಿ ಕಿರಣ್‌ರಾಜ್ ಪೂಂಜರೆಕೋಡಿ ಆಯ್ಕೆಯಾಗಿದ್ದಾರೆ.

ಬಿ.ಸಿ.ರೋಡ್‌ನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆದ ಘಟಕದ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಅವರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರ ಪಟ್ಟಿಯನ್ನು ಪ್ರಕಟಿಸಿದರು.

2026-27ನೇ ಸಾಲಿನ ಕಾರ್ಯಕಾರಿ ಸಮಿತಿಗೆ ಪ್ರಥಮ ಉಪಾಧ್ಯಕ್ಷರಾಗಿ ನಿಕೇಶ್ ಕೋಟ್ಯಾನ್, ದ್ವಿತೀಯ ಉಪಾಧ್ಯಕ್ಷರಾಗಿ ಹರೀಶ್ ಸಾಲ್ಯಾನ್ ಅಜೆಕಲ, ಕಾರ್ಯದರ್ಶಿಯಾಗಿ ಗೀತಾ ಜಗದೀಶ್, ಜತೆ ಕಾರ್ಯದರ್ಶಿಯಾಗಿ ಧನುಷ್ ಮಧ್ವ ಹಾಗೂ ಕೋಶಾಧಿಕಾರಿಯಾಗಿ ಪ್ರಜಿತ್ ಅಮೀನ್ ಏರಮಲೆ ಪದಾಧಿಕಾರಿಗಳಾಗಿ ಆಯ್ಕೆಯಾದರು.

ಆಂತರಿಕ ಲೆಕ್ಕ ಪರಿಶೋಧಕರಾಗಿ ನವೀನ್ ಪೂಜಾರಿ ಲೊರೆಟ್ಟೊ, ವಿದ್ಯಾನಿಧಿ ನಿರ್ದೇಶಕರಾಗಿ ಯೋಗೀಶ್ ಪೂಜಾರಿ ಕಲ್ಲಡ್ಕ, ನಾರಾಯಣಗುರು ತತ್ವ ಪ್ರಚಾರ ಮತ್ತು ಅನುಷ್ಠಾನ ನಿರ್ದೇಶಕರಾಗಿ ಮಹೇಶ್ ಪೂಜಾರಿ ಬೊಳ್ಳಾಯಿ, ಕ್ರೀಡಾ ನಿರ್ದೇಶಕರಾಗಿ ವಿಕ್ರಮ್ ಶಾಂತಿ ಕೆರೆಕೋಡಿಗುತ್ತು, ಸಾಂಸ್ಕೃತಿಕ ನಿರ್ದೇಶಕರಾಗಿ ನವೀನ್ ಕುಡ್ಮೇರ್, ಪ್ರಚಾರ ನಿರ್ದೇಶಕರಾಗಿ ಬ್ರಿಜೇಶ್ ಕಂಜತ್ತೂರು, ಆರೋಗ್ಯ ನಿರ್ದೇಶಕರಾಗಿ ಶೇಖರ ಪೂಜಾರಿ ಅಗಲ್ದೋಡಿ, ಸಮಾಜ ಸೇವಾ ನಿರ್ದೇಶಕರಾಗಿ ಚಿನ್ನಾ ಕಲ್ಲಡ್ಕ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಅಶ್ವಿನ್ ಅಮೀನ್, ವ್ಯಕ್ತಿತ್ವ ವಿಕಸನ ನಿರ್ದೇಶಕರಾಗಿ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಉದ್ಯೋಗ ಮತ್ತು ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ನವೀನ್ ಪೂಜಾರಿ ಕಾರಾಜೆ, ವಿದ್ಯಾರ್ಥಿ ಸಂಘಟನಾ ನಿರ್ದೇಶಕರಾಗಿ ಕಾವ್ಯಾ ಸೋರ್ನಾಡು ಹಾಗೂ ಮಹಿಳಾ ಸಂಘಟನೆ ನಿರ್ದೇಶಕರಾಗಿ ಸ್ನೇಹಾ ಸುರೇಶ್ ಆಯ್ಕೆಯಾದರು.

ಸಂಘಟನಾ ಕಾರ್ಯದರ್ಶಿಗಳಾಗಿ ಸರಿತಾ, ಜಗನ್ನಾಥ್ ಕಲ್ಲಡ್ಕ, ಚಿಂತನ್ ರಾಜ್, ಸುನೀತಾ ಮಾರ್ನಬೈಲು, ದೀರಜ್ ಕೋಟ್ಯಾನ್ ಜಕ್ರಿಬೆಟ್ಟು, ಮಲ್ಲಿಕಾ ಜ್ಯೋತಿಗುಡ್ಡೆ, ಮನ್ವಿತ್ ಕಾಂಜಿರಕೋಡಿ ಹಾಗೂ ನಿತಿನ್ ಕೆಮ್ಮಟೆಗುಡ್ಡೆ ಆಯ್ಕೆಯಾದರು. ಆಯ್ಕೆ ಸಮಿತಿಯ ಸದಸ್ಯರಾದ ರಾಮಚಂದ್ರ ಸುವರ್ಣ, ಪ್ರೇಮನಾಥ್ ಕೆ., ನಾಗೇಶ್ ಪೊನ್ನೋಡಿ, ರಾಜೇಶ್ ಸುವರ್ಣ ಹಾಗೂ ನಾಗೇಶ್ ಪೂಜಾರಿ ನೈಬೇಲು ಅವರು ಆಯ್ಕೆ ಪ್ರಕ್ರಿಯೆಗೆ ಸಹಕಾರ ನೀಡಿದರು.

Ads on article

Advertise in articles 1

advertising articles 2

Advertise under the article