-->
ಕಾರ್ಕಳ–ಮಾಳ ರಾ. ಹೆದ್ದಾರಿಯಲ್ಲಿ ಕಳ್ಳರ ಕೈಚಳಕ: 20ಕ್ಕೂ ಹೆಚ್ಚು ಸೂಚನಾ ಫಲಕಗಳು ನಾಪತ್ತೆ

ಕಾರ್ಕಳ–ಮಾಳ ರಾ. ಹೆದ್ದಾರಿಯಲ್ಲಿ ಕಳ್ಳರ ಕೈಚಳಕ: 20ಕ್ಕೂ ಹೆಚ್ಚು ಸೂಚನಾ ಫಲಕಗಳು ನಾಪತ್ತೆ


ಕಾರ್ಕಳ–ಮಾಳ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ–169ರಲ್ಲಿ ರಸ್ತೆ ಸುರಕ್ಷತೆಗಾಗಿ ಅಳವಡಿಸಲು ಸಿದ್ಧವಾಗಿದ್ದ 20ಕ್ಕೂ ಹೆಚ್ಚು ದಾರಿ ಸೂಚಕ ಫಲಕಗಳು, ವೇಗಮಿತಿ ಫಲಕಗಳು ಹಾಗೂ ಕಬ್ಬಿಣದ ಕಂಬಗಳು ಕಳ್ಳರ ಪಾಲಾಗಿದೆ.


ಕಾರ್ಕಳ ಬೈಪಾಸ್‌ನಿಂದ ಮಾಳ ಗೇಟ್‌ವರೆಗಿನ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದ್ದು, ಕೆಲವೆಡೆ ಫಲಕಗಳನ್ನು ಮಾತ್ರವಲ್ಲದೆ ಅವುಗಳನ್ನು ಅಳವಡಿಸಲು ಬಳಸಿದ್ದ ಕಬ್ಬಿಣದ ಕಂಬಗಳನ್ನೇ ಕತ್ತರಿಸಿ ಕೊಂಡೊಯ್ಯಲಾಗಿದೆ.  

ಸೂಚನಾ ಫಲಕಗಳ ಕೊರತೆಯಿಂದ ವಾಹನ ಸವಾರರಿಗೆ ಮಾರ್ಗ ಗುರುತಿಸಲು ತೊಂದರೆಯಾಗಲಿದ್ದು, ರಾತ್ರಿ ವೇಳೆ ಅಪಘಾತಗಳ ಅಪಾಯ ಹೆಚ್ಚುವ ಭೀತಿ ವ್ಯಕ್ತವಾಗಿದೆ. 

ಪ್ರಾಥಮಿಕ ಮಾಹಿತಿಯಂತೆ, ಕಬ್ಬಿಣದ ವಸ್ತುಗಳನ್ನು ಗುಜರಿಗೆ ಮಾರಾಟ ಮಾಡುವ ಉದ್ದೇಶದಿಂದಲೇ ಈ ಕಳ್ಳತನ ನಡೆದಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ಮುಂದಾಗಿದ್ದು, ಸಿಸಿಟಿವಿ ದೃಶ್ಯಾವಳಿ ಹಾಗೂ ಸ್ಥಳೀಯರಿಂದ ದೊರೆಯುತ್ತಿರುವ ಮಾಹಿತಿಯ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

ಸಾರ್ವಜನಿಕ ಆಸ್ತಿಯ ರಕ್ಷಣೆಯಲ್ಲಿ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ತಪ್ಪಿತಸ್ಥರನ್ನು ಶೀಘ್ರವೇ ಬಂಧಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Ads on article

Advertise in articles 1

advertising articles 2

Advertise under the article