-->
ಗಾಳಿ-ಮಳೆ: ಮಣಿಪಾಲ ಹೆದ್ದಾರಿಯಲ್ಲಿ ಮರದ ಕೊಂಬೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ

ಗಾಳಿ-ಮಳೆ: ಮಣಿಪಾಲ ಹೆದ್ದಾರಿಯಲ್ಲಿ ಮರದ ಕೊಂಬೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ


ಉಡುಪಿ ಮಣಿಪಾಲ ರಸ್ತೆಯ ಹಯಾಗ್ರೀವ ನಗರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 169(A) ರ ಮೇಲೆ ಮರದ ದೊಡ್ಡ ಕೊಂಬೆಯೊಂದು ತುಂಡಾಗಿ ರಸ್ತೆಗೆ ಬಿದ್ದು ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಉಡುಪಿ ನಗರದಲ್ಲಿ ಮಂಗಳವಾರ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಯಗ್ರೀವ ನಗರದಲ್ಲಿ ಬೃಹತ್ ಮರದ ಕೊಂಬೆ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಕೆಲ ಹೊತ್ತು ತೊಡಕುಂಟಾಯಿತು, ವಿಷಯ ತಿಳಿಯುತ್ತಿದ್ದಂತೆಯೇ ಮೆಸ್ಕಾಂ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಮರದ ಕೊಂಬೆಯನ್ನು ಕತ್ತರಿಸಿ ರಸ್ತೆಯಿಂದ ತೆರವುಗೊಳಿಸಿದರು. ಬಳಿಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Ads on article

Advertise in articles 1

advertising articles 2

Advertise under the article