ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ 2026- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ
Monday, July 06, 2026
ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ 2026- 27ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಜುಲೈ 4 ರಂದು ಕಾರ್ಕಳದ ಹೊಟೇಲ್ ಕಟೀಲ್ ಇಂಟರ್‌ನ್ಯಾಶನಲ್‌ನಲ್ಲಿ ಜರುಗಿತು.
ಜಿಲ್ಲೆ 317ಸಿಯ ಪ್ರಥಮ ಉಪಜಿಲ್ಲಾ ಗವರ್ನರ್ ಪಿಎಂಜೆಎಫ್ ಹರಿಪ್ರಸಾದ್ ರೈ ಅವರು ದೀಪಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಪದಗ್ರಹಣ ಸಮಾರಂಭವನ್ನು ನೆರವೇರಿಸಿಕೊಟ್ಟರು.
ಅಧ್ಯಕ್ಷರಾಗಿ ನಯನ ನಾಯಕ್, ಕಾರ್ಯದರ್ಶಿಯಾಗಿ ನಿಹಾಲ್‌ಶೆಟ್ಟಿ ಜಕ್ಕನ್ಮಕ್ಕಿ, ಕೋಶಾಧಿಕಾರಿಯಾಗಿ ಟಿ. ಕೆ. ರಘುವೀರ್ ಆಯ್ಕೆಯಾದರು.
ಲಯನ್ಸ್ ಕ್ಲಬ್ ಕಾರ್ಕಳ ಸಿಟಿಗೆ ನೂತನ ಸದಸ್ಯರಾಗಿ ಸೇರ್ಪಡೆಗೊಂಡಿರುವ ನಿವೃತ್ತ ಶಿಕ್ಷಕರು ಹಾಗೂ ಪ್ರಸ್ತುತ ಯೋಗ ಶಿಕ್ಷಕಿಯಾಗಿರುವ ಸುಲೋಚನಾ ನಾಯಕ್ ಮತ್ತು ಉದ್ಯಮಿ ರಘುಪತಿ ನಾಯಕ್ ಅವರಿಗೆ ಹರಿಪ್ರಸಾದ್ ರೈ ಅವರು ಪ್ರಮಾಣವಚನ ಬೋಧಿಸಿದರು.
ಸೇವಾ ಕಾರ್ಯಕ್ರಮದಲ್ಲಿ ವೈದ್ಯಕೀಯ ದಿನಾಚರಣೆಯ ಅಂಗವಾಗಿ ಕಾರ್ಕಳದ ವೈದ್ಯರಾದ ಡಾ. ಸಂಜಯ್ ಡಾ. ಕಾರ್ತಿಕ್ ರಾವ್, ಡಾ. ಸುಮಂಗಲಾ ರಾವ್ ಮತ್ತು ಡಾ. ನಿತಿನ್ ಶೆಟ್ಟಿಯವರನ್ನು ಗೌರವಿಸಲಾಯಿತು. ಇಬ್ಬರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ಗೌರವಧನ ನೀಡಲಾಯಿತು.
ವೇದಿಕೆಯಲ್ಲಿ ಪ್ರಾಂತ್ಯ 6ರ ಪ್ರಾಂತ್ಯಾಧ್ಯಕ್ಷ ಥೋಮಸ್ ಲುಕೋಸ್, ವಲಯಾಧ್ಯಕ್ಷ ಸುಧೀರ್ ಹೆಗ್ಡೆ ಉಪಸ್ಥಿತರಿದ್ದರು. ಸದಸ್ಯರಾದ ಜಯಂತಿ ಶೆಟ್ಟಿ ಪ್ರಾರ್ಥಿಸಿ, ನಿಕಟಪೂರ್ವ ಅಧ್ಯಕ್ಷ ಗೋಪಾಲ್ ಅಂಚನ್ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ವೀಣಾ ಶೆಟ್ಟಿ ಧ್ವಜವಂದನೆ ಗೈದು, ಕಾರ್ಯದರ್ಶಿ ನಿಹಾಲ್ ಶೆಟ್ಟಿ ಜಕ್ಕನ್‌ಮಕ್ಕಿ ವಂದಿಸಿದರು. ಸ್ಥಾಪಕಾಧ್ಯಕ್ಷೆ ಜ್ಯೋತಿ ರಮೇಶ್ ಕಾರ್ಯಕ್ರಮ ನಿರೂಪಿಸಿದರು. ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಎಲ್ಲ ಸದಸ್ಯರು ಉಪಸ್ಥಿತರಿದ್ದರು.


