ಭಾರೀ ಗಾಳಿ- ಮಳೆಗೆ ಶಾಲೆಯ ಹೆಂಚು ಕುಸಿದು ವಿದ್ಯಾರ್ಥಿನಿಗೆ ಗಾಯ
Monday, July 06, 2026
ಭಾರೀ ಗಾಳಿ-ಮಳೆಗೆ ಬ್ರಹ್ಮಾವರದ ಬೋರ್ಡ್ ಪ್ರೈಮರಿ ಶಾಲೆಯಲ್ಲಿ ಹೆಂಚು ಕುಸಿದು ವಿದ್ಯಾರ್ಥಿನಿ ಗಾಯಗೊಂಡ ಘಟನೆ ನಡೆದಿದೆ.
ಇಂದು ಬೆಳಗ್ಗೆ ಭಾರೀ ಗಾಳಿ ಮಳೆ ಸುರಿದ್ದು, ಬ್ರಹ್ಮಾವರ ಬೋರ್ಡ್ ಪ್ರೈಮರಿ ಶಾಲೆಯ ಹೆಂಚು ಏಕಾಏಕಿ ಕುಸಿದಿದೆ. ವಿದ್ಯಾರ್ಥಿನಿಯೊಬ್ಬಳ ಕಾಲಿಗೆ ಗಾಯಗಳಾಗಿದ್ದು, ತಕ್ಷಣವೇ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಸ್ಥಳಕ್ಕೆ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.
ಭಾರೀ ಮಳೆಯ ಹಿನ್ನೆಲೆಯಲ್ಲಿ ಹಳೆಯ ಶಾಲಾ ಕಟ್ಟಡಗಳ ಸುರಕ್ಷತೆ ಬಗ್ಗೆ ಪೋಷಕರು ಹಾಗೂ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದು, ಶಾಲಾ ಕಟ್ಟಡಗಳ ಸ್ಥಿತಿಯನ್ನು ಪರಿಶೀಲಿಸಿ ಅಗತ್ಯ ದುರಸ್ತಿ ಕಾರ್ಯಗಳನ್ನು ಶೀಘ್ರ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.