ಭಾರೀ ಮಳೆಗೆ ಶಾಲಾ ಆವರಣ ಗೋಡೆ ಕುಸಿತ
Monday, July 06, 2026
ಭಾರೀ ಗಾಳಿ-ಮಳೆಯ ಪರಿಣಾಮ ಪುತ್ತೂರು ತಾಲೂಕಿನ ನರಿಮೊಗರು ಹಿರಿಯ ಪ್ರಾಥಮಿಕ ಶಾಲೆಯ ಆವರಣ ಗೋಡೆಯೊಂದು ಕುಸಿದು ಬಿದ್ದ ಘಟನೆ ಭಾನುವಾರ ಸಂಜೆ ನಡೆದಿದೆ. ಘಟನೆಯ ವೇಳೆ ಶಾಲೆಗೆ ರಜೆ ಇದ್ದ ಕಾರಣ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.
ಭಾನುವಾರ ಸಂಜೆ ಸುರಿದ ಭಾರೀ ಗಾಳಿ-ಮಳೆಯ ಹೊಡೆತಕ್ಕೆ ಶಾಲೆಯ ಆವರಣ ಗೋಡೆ ಏಕಾಏಕಿ ಕುಸಿದು ಬಿದ್ದಿದೆ. ಸೋಮವಾರ ಬೆಳಿಗ್ಗೆ ಈ ವಿಷಯ ಬೆಳಕಿಗೆ ಬಂದಿದೆ. ಕುಸಿದು ಬಿದ್ದ ಗೋಡೆಯ ಪಕ್ಕದಲ್ಲಿ ಇನ್ನೂ ವಾಲಿ ನಿಂತಿರುವ ಆವರಣ ಗೋಡೆಯೂ ಅಪಾಯದ ಸ್ಥಿತಿಯಲ್ಲಿರುವುದರಿಂದ, ವಿದ್ಯಾರ್ಥಿಗಳು ಆ ಭಾಗಕ್ಕೆ ತೆರಳದಂತೆ ತಕ್ಷಣ ಸುರಕ್ಷತಾ ಕ್ರಮ ಕೈಗೊಳ್ಳಬೇಕು ಎಂದು ಶಾಲಾ ಆಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ.