ಶೀರೂರು ಮಠದ ಪೂರ್ವ ಯತಿ ಶ್ರೀ ಲಕ್ಷ್ಮೀವರ ತೀರ್ಥರ 8ನೇ ವರ್ಷದ ಆರಾಧನೆ: ಶ್ರೀ ಕೃಷ್ಣಮಠದಲ್ಲಿ ಪಲ್ಲಪೂಜೆ
Tuesday, July 21, 2026
ಶೀರೂರು ಮಠದ ಪೂರ್ವ ಯತಿಗಳಾದ ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ 8ನೇ ವರ್ಷದ ಆರಾಧನಾ ಮಹೋತ್ಸವದ ಅಂಗವಾಗಿ ಶ್ರೀ ಕೃಷ್ಣ ಮಠದ ಭೋಜನ ಶಾಲೆಯಲ್ಲಿ ಪಲ್ಲ ಪೂಜೆ ಕಾರ್ಯಕ್ರಮವು ನೆರವೇರಿತು.
ಪರ್ಯಾಯ ಪೀಠಾಧೀಶರಾದ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ನಡೆದ ಪೂಜಾ ಕಾರ್ಯಕ್ರಮದಲ್ಲಿ ಶೀರೂರು ಮಠದ ಪರಂಪರೆಯಂತೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಠದ ಪುರೋಹಿತರು, ವಿದ್ವಾಂಸರು, ಭಕ್ತರು ಹಾಗೂ ಮಠದ ಸಿಬ್ಬಂದಿ ಉಪಸ್ಥಿತರಿದ್ದು, ಶ್ರೀ ಲಕ್ಷ್ಮೀವರ ತೀರ್ಥ ಶ್ರೀಪಾದರ ಸ್ಮರಣೆಯೊಂದಿಗೆ ಆರಾಧನಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
