ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಅಧ್ಯಕ್ಷರಾಗಿ ಹುಸೇನ್ ಹೈಕಾಡಿ ಪ್ರಮಾಣ ವಚನ
ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಇದರ ಅಧ್ಯಕ್ಷರಾಗಿ ಹುಸೇನ್ ಹೈಕಾಡಿ ಯವರಿಗೆ ಲಯನ್ 317 ಸಿ ಯ ಎಲ್ ಸಿ ಐ ಎಫ್ ಸಂಯೋಜಕರಾದ ಹೃಷಿಕೇಶ್ ಹೆಗ್ಡೆ ಪ್ರಮಾಣ ವಚನ ಬೋಧಿಸಿದರು.
ನಾಯಕತ್ವ ಎಂಬುದು ಒಂದು ಸಾಮೂಹಿಕ ಕ್ರಿಯೆ ಎಂಬುದನ್ನು ಲಯನ್ಸ್ ಬಲವಾಗಿ ನಂಬಿದೆ, ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಧ್ಯಸ್ಯನಲ್ಲೂ ನಾಯಕತ್ವ ಗುಣವನ್ನು ಬೆಳೆಸುವುದು ನಮ್ಮ ಉದ್ದೇಶ. ಪ್ರತಿಯೊಬ್ಬರೂ ಅವರವರ ಕ್ಷೇತ್ರದಲ್ಲಿ ತಮ್ಮ ಛಾಪನ್ನು ಮೂಡಿಸಬೇಕಾದರೆ ನಾಯಕತ್ವದ ಶಕ್ತಿ ಬಹುಮುಖ್ಯವಾಗಿರುತ್ತದೆ. ಅದಕ್ಕಾಗಿ ನಾಯಕತ್ವದ ಬೆಳವಣಿಗೆಗೆ ಮಹತ್ವ ನೀಡುತ್ತಿದ್ದೇವೆ ಎಂದುರು.
ಮುಖ್ಯ ಅತಿಥಿಯಾಗಿ ಆಗಮಿಸಿದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ ಸಮಾಜದ ಕಟ್ಟಕಡೆಯ ಮನುಷ್ಯ ಕೂಡ ಗೌರವಯುತವಾದ ಬದುಕನ್ನು ಬಾಳಬೇಕು. ಇದು ಲಯನ್ಸ್ ನ ನಿಜವಾದ ಆಶಯ. ಹಲವಾರು ಕಾರಣಗಳಿಂದ ಇಂದು ಕೋಟ್ಯಾoತರ ಜನರು ಬಡತನದಲ್ಲಿ ಬದುಕುವoತಾಗಿದೆ. ಅವರಿಗೆ ಗೌರವಯುತವಾದ ಬದುಕನ್ನು ನೀಡಬೇಕೆಂದರೆ ಅವರನ್ನು ಬಡತನದಿಂದ ಬಿಡುಗಡೆಗೊಳಿಸಬೇಕಾಗಿದೆ ಎಂದು ನುಡಿದರು.
ಲಯನ್ ಜಿಲ್ಲಾ 317 ಸಿ ಪ್ರಾಂತೀಯ ಅಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ ಸಭೆಯನ್ನು ಉದ್ದೇಶಿಸಿ ಸದ್ಯಸ್ಯರು ರಕ್ತ ದಾನ ಮಾಡುದರ ಮೂಲಕ ಇನ್ನೊಬ್ಬರ ಪ್ರಾಣ ಉಳಿಸಬಹುದು. ಈ ರಕ್ತದಾನ ಮಾಡಿದವರ ಹಾಗು ರಕ್ತವನ್ನು ಸ್ವೀಕರಿಸಿದವರ ಅರೋಗ್ಯ ಗಣನಿಯವಾಗಿ ಉತ್ತಮ ಗೊಳ್ಳುತ್ತದೆ. ರಕ್ತದಾನ ಮನುಷ್ಯತ್ವದ ಇನ್ನೊಂದು ರೂಪ. ಲಯನ್ಸ್ ಕ್ಲಬ್ ರಕ್ತದಾನಕ್ಕೂ ಬಹಳ ಪ್ರಾಮುಖ್ಯತೆಯನ್ನು ನೀಡುತ್ತದೆ ಎಂದರು.
ಲಯನ್ಸ್ ಜಿಲ್ಲಾ ವಲಯ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ನಮ್ಮ ದೇಶದಲ್ಲಿ ಅಪಾರವಾದ ಮಾನವ ಸಂಪನ್ಮೂಲ ಇದೆ, ಇದನ್ನು ಮನುಷ್ಯನ ಮತ್ತು ರಾಷ್ಟ್ರದ ಅಭಿವೃದ್ಧಿಗೆ ಬಳಸಿಕೊಳ್ಳುವುದು ಅತ್ಯಂತ ಮುಖ್ಯವಾದುದು. ಮಾನವ ಸಂಪನ್ಮೂಲ ವನ್ನು ಬೆಳೆಸಲು ತರಬೇತಿ ಅತೀ ಮುಖ್ಯವಾದ ಟೂಲ್ ಆಗಿದೆ ಎಂದು ನುಡಿದರು.
ಜ್ಞಾನ ಕೌಶಲ್ಯ ಹಾಗು ಜೀವನ ಮೌಲ್ಯಗಳನ್ನು ಹೆಚ್ಚಿಸುವುದು ವಿದ್ಯಾಭ್ಯಾಸ ದ ಮೂಲ ಆಶಯ ಆದರೆ ಕೆಲವೊಂದು ಕಾರಣದಿಂದಾಗಿ ಸಾರ್ವತ್ರಿಕ ಸಾಕ್ಷರತೆ ಸಾಧ್ಯವಾಗುತ್ತಿಲ್ಲ, ಲಯನ್ಸ್ ಸಂಸ್ಥೆಗಳು ಈ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯನ್ನು ಇಡಬೇಕಾಗಿದೆ ಎಂದು ಲಯನ್ಸ್ 317 ಸಿ ಜಿ ಎಮ್ ಟಿ ಸಂಯೋಜಕರಾದ ರೋವನ್ ಡಿ ಕೋಸ್ಟ ನುಡಿದರು.
ಸಭಾ ಕಾರ್ಯಕ್ರಮದಲ್ಲಿ ಶಿಕ್ಷಣ ಹಾಗು ವೈದ್ಯಕೀಯ ನೆರವನ್ನು ಹೇಮಲತಾ ಹಾಗು ಪ್ರಜ್ವಲ್ ರವರಿಗೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಲಯನ್ಸ್ ಕ್ಲಬ್ ಕುಂದಾಪುರ ವೆಯಿಟ್ ಝೋನ್ ಅಧ್ಯಕ್ಷರಾದ ಹುಸೇನ್ ಹೈಕಾಡಿ ವಹಿಸಿದರು,
ನಿಕಟಪೂರ್ವ ಅಧ್ಯಕ್ಷ ವಿಜಯ ಭಂಡಾರಿ ಸ್ವಾಗತಿಸಿದರು.
ಉಪಾಧ್ಯಕ್ಷರಾದ ಪ್ರಸನ್ನ ಕುಮಾರ್ ದ್ವಜಾವಂದನೆಗೈದರು. ತ್ರಿವಿಕ್ರಮ ನಾಯಕ್ ಲಯನ್ಸ್ ನೀತಿ ಸಂಹಿತೆ ವಾಚಿಸಿದರು.
ರಾಘವೇಂದ್ರ ಚರಣ್ ನಾವಡ, ಕಿರಣ್ ದೇವಾಡಿಗ, ಸಂದೀಪ್ ಕಾಮತ್ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಪ್ರದೀಪ್ ಬಂಗೇರ ವಂದಿಸಿದರು.