ಟ್ರೇಲರ್ ರಸ್ತೆ ಮಧ್ಯೆ ಸಿಲುಕಿ ತಾಸುಗಟ್ಟಲೆ ಟ್ರಾಫಿಕ್ ಜಾಂ
Monday, July 06, 2026
ಪಣಂಬೂರು ಸಮೀಪ ಯಂತ್ರ ಸಾಗಿಸುತ್ತಿದ್ದ ಟ್ರೇಲರ್ ರಸ್ತೆ ಮಧ್ಯೆ ಸಿಲುಕಿಕೊಂಡ ಪರಿಣಾಮ ತಾಸುಗಟ್ಟಲೆ ಭಾರೀ ಟ್ರಾಫಿಕ್ ಜಾಂ ಉಂಟಾದ ಘಟನೆ ನಡೆದಿದೆ.
ಟ್ರೇಲರ್ ರಸ್ತೆ ಮಧ್ಯೆ ಸಿಲುಕಿದ್ದರಿಂದ ಎರಡೂ ದಿಕ್ಕಿನ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿ, ನೂರಾರು ವಾಹನಗಳು ಸಾಲುಗಟ್ಟಿ ನಿಂತವು. ಸ್ಥಳಕ್ಕೆ ಪೊಲೀಸರು ಆಗಮಿಸಿ ವಾಹನ ಸಂಚಾರವನ್ನು ನಿಯಂತ್ರಿಸುವ ಪ್ರಯತ್ನ ನಡೆಸಿದರು. ಬಳಿಕ ಟ್ರೇಲರ್ ಅನ್ನು ತೆರವುಗೊಳಿಸಿದ ನಂತರ ಸಂಚಾರ ಸಹಜ ಸ್ಥಿತಿಗೆ ಮರಳಿತು.
ಘಟನೆಯಿಂದ ವಾಹನ ಸವಾರರು ಮತ್ತು ಸಾರ್ವಜನಿಕರು ಸಾಕಷ್ಟು ಸಮಯ ಟ್ರಾಫಿಕ್‌ನಲ್ಲಿ ಸಿಲುಕಿ ಪರದಾಡಬೇಕಾಯಿತು.