-->
 ಉಡುಪಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ನೂತನ ಪದಾಧಿಕಾರಿಗಳ ನೇಮಕ

ಉಡುಪಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾ ನೂತನ ಪದಾಧಿಕಾರಿಗಳ ನೇಮಕ


ಉಡುಪಿ ಜಿಲ್ಲಾ ಬಿಜೆಪಿ ಎಸ್‌ಸಿ ಮೋರ್ಚಾದ ನೂತನ ಪದಾಧಿಕಾರಿಗಳನ್ನು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರ ಅನುಮೋದನೆ ಮೇರೆಗೆ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ನೇಮಕ ಮಾಡಿ ಪದಾಧಿಕಾರಿಗಳ ಪಟ್ಟಿಯನ್ನು ಪ್ರಕಟಿಸಿದ್ದಾರೆ.

ಉಪಾಧ್ಯಕ್ಷರಾಗಿ ಹೆರಿಯಣ್ಣ ಅಮ್ಮುಂಜೆ, ಮಾಧವ ಸಾಸ್ತಾನ, ಅನಿತಾ ವಿ. ಸಾಲಿಯಾನ್, ಸುಂದರ ಕೆ. ಹಾಗೂ ಸುಂದರ್ ಬಾಬು ಅವರನ್ನು ನೇಮಕ ಮಾಡಲಾಗಿದೆ.

ಪ್ರಧಾನ ಕಾರ್ಯದರ್ಶಿಗಳಾಗಿ ಸದಾನಂದ ಕೈಪುಂಜಾಲು ಹಾಗೂ ಸುಧಾಕರ ಅಮೀನ್, ಕಾರ್ಯದರ್ಶಿಗಳಾಗಿ ಸುಂದರ್ ಬಿ. ಈದು, ಸುರೇಶ್ ಮೂಡುಬಗೆ, ಸದಾನಂದ ಚಾಂತಾರು, ಬೇಬಿ ರಾಜೇಶ್ ಹಾಗೂ ರೇಖಾ ಶಂಕರ ಅವರನ್ನು ನೇಮಕಗೊಳಿಸಲಾಗಿದೆ. ಕೋಶಾಧಿಕಾರಿಯಾಗಿ ಈಶ್ವರ ಶೀರೂರು ಹಾಗೂ ಸಾಮಾಜಿಕ ಜಾಲತಾಣ ಪ್ರಮುಖರಾಗಿ ಅರುಣ್ ಕುಮಾರ್ ಅವರನ್ನು ನಿಯುಕ್ತಿಗೊಳಿಸಲಾಗಿದೆ.

ಕಾರ್ಯಕಾರಿಣಿ ಸದಸ್ಯರಾಗಿ ಹರಿಶ್ಚಂದ್ರ, ಸುಂದರ ಎ., ಕಿರಣ್ ಕುಮಾರ್, ಪ್ರದೀಪ್ ಮಾರ್ಗೊಳ್ಳಿ, ಶಿವಾನಂದ, ವೀಣಾ, ಸುರೇಶ್, ಅಣ್ಣಪ್ಪ, ಯಶೋದ, ಕೃಷ್ಣ, ಗೀತಾ, ಉದಯ ಕುಮಾರ್ ಬತ್ತಡ, ಮಂಜುಳಾ, ರವೀಂದ್ರ ಎಸ್. ಸೌಕೂರು, ಹರ್ಷ ಹಾಗೂ ನಾಗರತ್ನ ಅವರನ್ನು ನೇಮಕ ಮಾಡಲಾಗಿದೆ.

ನೂತನವಾಗಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳು ಸಂಘಟನೆಯ ಬಲವರ್ಧನೆ ಹಾಗೂ ಪಕ್ಷದ ಚಟುವಟಿಕೆಗಳನ್ನು ತಳಮಟ್ಟದಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಮುನ್ನಡೆಸುವ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕೃಷ್ಣಮೂರ್ತಿ ಡಿ.ಬಿ. ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

Advertise in articles 1

advertising articles 2

Advertise under the article