-->
ಶಾಲಾ ಬಸ್ಸಿನ ಮೇಲೆ ಮರ ಬಿದ್ದು ಬಾಲಕಿ ದಾರುಣ ಸಾವು

ಶಾಲಾ ಬಸ್ಸಿನ ಮೇಲೆ ಮರ ಬಿದ್ದು ಬಾಲಕಿ ದಾರುಣ ಸಾವು


ಶಾಲಾ ಬಸ್ ಮೇಲೆ ಬೃಹತ್ ಮರವೊಂದು ಉರುಳಿ ಬಿದ್ದು ಆರು ವರ್ಷ ಪ್ರಾಯದ ಬಾಲಕಿ ಸಾವನಪ್ಪಿದ ಘಟನೆ  ಬಂಟ್ವಾಳ ತಾಲೂಕಿನ ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ನಡೆದಿದೆ. 

ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಾಯಗಳಾಗಿದ್ದು ಬಂಟ್ವಾಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಪೈಕಿ ಚಿರನ್ವಿ(1) ಎಂಬ ಒಂದನೇ ತರಗತಿ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ. ಬರಿಮಾರು ಗ್ರಾಮದ ಕಲ್ಲೆಟ್ಟಿ ಎಂಬಲ್ಲಿ ಸಾಗುತ್ತಿದ್ದಾಗ ಮಳೆ ಗಾಳಿಗೆ ಏಕಾಏಕಿ ಮರ ಉರುಳಿ ಬಸ್ ಮೇಲೆ ಬಿದ್ದು ಅವಘಡ ಸಂಭವಿಸಿದೆ. ಅಪಘಾತಕ್ಕೊಳಗಾದ ಬಸ್ ಕಲ್ಲಡ್ಕದ ‘ಶ್ರೀರಾಮ ವಿದ್ಯಾಕೇಂದ್ರ’ ಶಿಕ್ಷಣ ಸಂಸ್ಥೆಗೆ ಸೇರಿದ್ದಾಗಿದೆ. 

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Ads on article

Advertise in articles 1

advertising articles 2

Advertise under the article