-->
ಉಡುಪಿಯ ಪೋದಾರ್ ಪ್ರೆಪ್ ನಲ್ಲಿ ತಂದೆ-ಮಗುವಿನ 'ಮಾಸ್ಟರ್‌ಶೆಫ್' ಕಾರ್ಯಕ್ರಮ

ಉಡುಪಿಯ ಪೋದಾರ್ ಪ್ರೆಪ್ ನಲ್ಲಿ ತಂದೆ-ಮಗುವಿನ 'ಮಾಸ್ಟರ್‌ಶೆಫ್' ಕಾರ್ಯಕ್ರಮ


ಮಕ್ಕಳಲ್ಲಿ ಆರೋಗ್ಯಕರ ಆಹಾರ ಪದ್ಧತಿ, ಸೃಜನಶೀಲತೆ ಹಾಗೂ ಕುಟುಂಬ ಬಾಂಧವ್ಯವನ್ನು ಬೆಳೆಸುವ ಉದ್ದೇಶದಿಂದ ಉಡುಪಿಯ ಪೋದಾರ್ ಪ್ರೆಪ್ ವತಿಯಿಂದ ವಿಶಿಷ್ಟವಾದ 'ಮಾಸ್ಟರ್‌ಶೆಫ್' ತಂದೆ-ಮಗುವಿನ ಪಾಕಶಾಲೆ ಕಾರ್ಯಕ್ರಮವನ್ನು ಆಯೋಜಿಸಲಾಯಿತು.


ಕಾರ್ಯಕ್ರಮದಲ್ಲಿ ಕೇವಲ 30 ನಿಮಿಷಗಳ ಅವಧಿಯಲ್ಲಿ ಬೆಂಕಿಯ ಬಳಕೆಯಿಲ್ಲದೆ, ನೈಸರ್ಗಿಕ ಪದಾರ್ಥಗಳನ್ನು ಮಾತ್ರ ಉಪಯೋಗಿಸಿ ಹಾಗೂ ಯಾವುದೇ ಕೃತಕ ಆಹಾರ ಬಣ್ಣಗಳನ್ನು ಬಳಸದೇ ಆರೋಗ್ಯಕರ ಸಸ್ಯಾಹಾರಿ ಖಾದ್ಯಗಳನ್ನು ಸೃಜನಾತ್ಮಕವಾಗಿ ಸಿದ್ಧಪಡಿಸಿದರು.  



ಕಾರ್ಯಕ್ರಮದಲ್ಲಿ ಪೋದಾರ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ನೇತ್ರಾ ಎಚ್., ಪೋದಾರ್ ಪ್ರೆಪ್ ಮುಖ್ಯೋಪಾಧ್ಯಾಯಿನಿ ಗೀತಾ ಲವೀನ್ ಪೂಜಾರಿ, ಆಡಳಿತಾಧಿಕಾರಿ ಹರೀಶ್ ನಾಯಕ್ ಹಾಗೂ ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದು, ಸ್ಪರ್ಧಾಳುಗಳನ್ನು ಪ್ರೋತ್ಸಾಹಿಸಿದರು.

ಕಾರ್ಯಕ್ರಮದ ಅಂತ್ಯದಲ್ಲಿ ಭಾಗವಹಿಸಿದ ಎಲ್ಲಾ ತಂದೆ-ಮಗುವಿನ ಜೋಡಿಗಳಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.  

Ads on article

Advertise in articles 1

advertising articles 2

Advertise under the article