-->
 ಕರ್ಣಾಟಕ ಬ್ಯಾಂಕ್‌ನಿಂದ ಗೋ ಸಂರಕ್ಷಣಾ ಕೇಂದ್ರಕ್ಕೆ ಲಘು ಸರಕು ವಾಹನ ಕೊಡುಗೆ

ಕರ್ಣಾಟಕ ಬ್ಯಾಂಕ್‌ನಿಂದ ಗೋ ಸಂರಕ್ಷಣಾ ಕೇಂದ್ರಕ್ಕೆ ಲಘು ಸರಕು ವಾಹನ ಕೊಡುಗೆ


 ಕರ್ಣಾಟಕ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (CSR) ಯೋಜನೆಯಡಿ ಹೂವಿನಕೆರೆಯ ಕಾಮಧೇನು ಗೋ ಸಂರಕ್ಷಣಾ ಕೇಂದ್ರದ ಗೋಶಾಲೆಯ ನಿತ್ಯೋಪಯೋಗಕ್ಕಾಗಿ ಲಘು ಸರಕು ವಾಹನವನ್ನು ಕೊಡುಗೆಯಾಗಿ ನೀಡಿತು.


ಕರ್ಣಾಟಕ  ಬ್ಯಾಂಕ್‌ನ ಡಿಜಿಎಂ ವಾದಿರಾಜ ಕೆ. ಅವರು ಸೋದೆ ಮಠಾಧೀಶ ಶ್ರೀವಿಶ್ವವಲ್ಲಭ ತೀರ್ಥ ಶ್ರೀಪಾದರಿಗೆ ವಾಹನದ ಕೀಲಿಕೈಯನ್ನು ಹಸ್ತಾಂತರಿಸಿದರು.

ಗೋಶಾಲೆಯ ದೈನಂದಿನ ಕಾರ್ಯಚಟುವಟಿಕೆಗಳಿಗೆ ಈ ವಾಹನವು ನೆರವಾಗಲಿದ್ದು, ಮೇವು, ಔಷಧಿ ಹಾಗೂ ಇತರ ಅಗತ್ಯ ವಸ್ತುಗಳ ಸಾಗಣೆಗೆ ಅನುಕೂಲವಾಗಲಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ಬ್ಯಾಂಕ್‌ನ ಎಜಿಎಂ ರಮೇಶ್ ವೈದ್ಯ, ಪ್ರತೀಕ್ ಟಿ. ಆರ್., ಪ್ರಶಾಂತ್ ಹಾಗೂ ಕಾಮಧೇನು ಗೋ ಸಂರಕ್ಷಣಾ ಕೇಂದ್ರದ ಸದಸ್ಯರಾದ ಚಂದ್ರಮೋಹನ ಧನ್ಯ, ರಾಮಚಂದ್ರ ವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article