-->
ಉಡುಪಿ ಜಾಮಿಯ ಮಸೀದಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ

ಉಡುಪಿ ಜಾಮಿಯ ಮಸೀದಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ


ಉಡುಪಿ ಜಾಮಿಯ ಮಸೀದಿಯ ವತಿಯಿಂದ ಮಸೀದಿ ವಠಾರದಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.

ಮಸೀದಿಯ ಅಧ್ಯಕ್ಷರಾದ ರಿಯಾಝ್ ಅಹಮದ್ ಅವರು ಧ್ವಜಾರೋಹಣ ನೆರವೇರಿಸಿದರು. ಬಳಿಕ ಮಾತನಾಡಿದ ಮಸೀದಿಯ ಖತೀಬ್ ರಶೀದ್ ಅಹಮದ್ ನದ್ವಿ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಬಲಿದಾನ ನೀಡಿದ ಮಹನೀಯರನ್ನು ಸ್ಮರಿಸಿ, ಸ್ವಾತಂತ್ರ್ಯದ ಮಹತ್ವ ಹಾಗೂ ದೇಶದ ಏಕತೆ, ಸೌಹಾರ್ದತೆಯನ್ನು ಕಾಪಾಡುವ ಜವಾಬ್ದಾರಿಯ ಕುರಿತು ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಮಸೀದಿಯ ಉಪಾಧ್ಯಕ್ಷ ವಿ.ಎಸ್. ಉಮರ್, ಕಾರ್ಯದರ್ಶಿ ಖಾಲಿದ್ ಅಬ್ದುಲ್ ಅಝೀಝ್, ಸಮಿತಿ ಸದಸ್ಯರಾದ ಮುನೀರ್ ಮಹಮ್ಮದ್, ಫಾಯಾಯ್ ಅಹಮದ್, ಇಫ್ತಿಕರ್, ರಿಯಾಝ್ ಕುಕ್ಕಿಕಟ್ಟೆ, ಪೂರ್ವಾಧ್ಯಕ್ಷ ಯಾಸೀನ್, ಪಾಪ್ಯುಲರ್ ಜಮಾತ್ ಸದಸ್ಯರು, ಮುಸಲ್ಲಿ ಬಾಂಧವರು ಹಾಗೂ ಮದ್ರಸ ವಿದ್ಯಾರ್ಥಿಗಳು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 

ಮಸೀದಿಯ ಮುಹಜ್ಜಿನ್ ಯೂನಸ್ ಅವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.


Ads on article

Advertise in articles 1

advertising articles 2

Advertise under the article