-->
 ಅಲೆವೂರು ಶಾಂತಿ ಗಣಪತಿ ಪೆಟ್ರೋಲಿಯಂ ಡೀಲರ್ IOCL ಲಿಮಿಟೆಡ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ

ಅಲೆವೂರು ಶಾಂತಿ ಗಣಪತಿ ಪೆಟ್ರೋಲಿಯಂ ಡೀಲರ್ IOCL ಲಿಮಿಟೆಡ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ


ಅಲೆವೂರಿನ ಶಾಂತಿ ಗಣಪತಿ ಪೆಟ್ರೋಲಿಯಂ ಡೀಲರ್ IOCL ಲಿಮಿಟೆಡ್‌ನಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಲಾಯಿತು.


ಅಲೆವೂರು ಶಾಂತಿ ಗಣಪತಿ ಪೆಟ್ರೋಲಿಯಂ ಡೀಲರ್ IOCL ಲಿಮಿಟೆಡ್‌ನ ಮಾಲಕ ಅಲೆವೂರು ಹರೀಶ್ ಕಿಣಿ ಅವರು ಧ್ವಜಾರೋಹಣ ನೆರವೇರಿಸಿ, ರಾಷ್ಟ್ರಧ್ವಜಕ್ಕೆ ಗೌರವ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಮತ್ತು ಬಲಿದಾನವನ್ನು ಸ್ಮರಿಸಿ, ದೇಶದ ಪ್ರಗತಿ ಹಾಗೂ ಏಕತೆಗಾಗಿ ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಬೇಕು ಎಂದು ಕರೆ ನೀಡಿದರು.


ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದು, ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯ ದಿನಾಚರಣೆಗೆ ಗೌರವ ಸಲ್ಲಿಸಿದರು.

Ads on article

Advertise in articles 1

advertising articles 2

Advertise under the article