-->
 ಕರ್ನಾಟಕದಲ್ಲಿ ‘ಅನಲಾಗ್ ಪನೀರ್’ಗೆ ಒಂದು ವರ್ಷದ ನಿಷೇಧ

ಕರ್ನಾಟಕದಲ್ಲಿ ‘ಅನಲಾಗ್ ಪನೀರ್’ಗೆ ಒಂದು ವರ್ಷದ ನಿಷೇಧ


ಸಾರ್ವಜನಿಕ ಆರೋಗ್ಯದ ಹಿತದೃಷ್ಟಿಯಿಂದ ಕರ್ನಾಟಕದಲ್ಲಿ ಹಾಲಿನ ಹೊರತು ಸಸ್ಯಜನ್ಯ ಎಣ್ಣೆ ಅಥವಾ ರಾಸಾಯನಿಕ ಪದಾರ್ಥಗಳಿಂದ ತಯಾರಿಸುವ ‘ಅನಲಾಗ್ ಪನೀರ್’ ತಯಾರಿಕೆ, ಸಂಗ್ರಹಣೆ, ಸಾಗಾಟ ಮತ್ತು ಮಾರಾಟಕ್ಕೆ ಒಂದು ವರ್ಷದ ಅವಧಿಗೆ ನಿಷೇಧ ಹೇರಲಾಗಿದೆ.

ಹಾಲು, ಹಾಲಿನ ಉತ್ಪನ್ನಗಳ ಬದಲಿಗೆ ಸಸ್ಯಜನ್ಯ ಕೊಬ್ಬು, ಎಣ್ಣೆ, ಪಿಷ್ಟ ಸೇರಿದಂತೆ ಇತರ ಪದಾರ್ಥಗಳನ್ನು ಬಳಸಿ ತಯಾರಿಸುವ ಉತ್ಪನ್ನಗಳನ್ನು ‘ಪನೀರ್’ ಹೆಸರಿನಲ್ಲಿ ಮಾರಾಟ ಮಾಡುವಂತಿಲ್ಲ. ಇಂತಹ ಉತ್ಪನ್ನಗಳನ್ನು ನಿಜವಾದ ಪನೀರ್ ಎಂದು ಮಾರಾಟ ಮಾಡುವುದು ಆಹಾರ ಸುರಕ್ಷತೆ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯಾಗಲಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್‌, ರೆಸ್ಟೋರೆಂಟ್‌, ಡೈರಿ ಹಾಗೂ ಪನೀರ್ ತಯಾರಿಕಾ ಘಟಕಗಳಲ್ಲಿ ತಪಾಸಣೆ ನಡೆಸಿ, ಅನುಮಾನಾಸ್ಪದ ಉತ್ಪನ್ನಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಲಿದ್ದಾರೆ. ನಿಯಮ ಉಲ್ಲಂಘನೆ ಕಂಡುಬಂದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು.

ಪನೀರ್ ಖರೀದಿಸುವಾಗ ಲೇಬಲ್‌, ಪದಾರ್ಥಗಳ ಪಟ್ಟಿ ಹಾಗೂ ಉತ್ಪಾದಕರ ವಿವರಗಳನ್ನು ಪರಿಶೀಲಿಸಬೇಕು. ‘Vegetable Fat’, ‘Vegetable Oil’, ‘Analog’ ಅಥವಾ ‘Non-Dairy’ ಎಂದು ನಮೂದಿಸಿರುವ ಉತ್ಪನ್ನಗಳನ್ನು ಸಾಮಾನ್ಯ ಹಾಲಿನ ಪನೀರ್ ಎಂದು ಪರಿಗಣಿಸಬಾರದು ಎಂದು ಆಹಾರ ಇಲಾಖೆ ಸೂಚಿಸಿದೆ. 

Ads on article

Advertise in articles 1

advertising articles 2

Advertise under the article