-->
 ಉಡುಪಿ ಅಲೆವೂರು ಬಾಳೆಹಣ್ಣು ದಾಸ್ತಾನು ಕೇಂದ್ರಗಳಿಗೆ ದಿಢೀರ್ ದಾಳಿ

ಉಡುಪಿ ಅಲೆವೂರು ಬಾಳೆಹಣ್ಣು ದಾಸ್ತಾನು ಕೇಂದ್ರಗಳಿಗೆ ದಿಢೀರ್ ದಾಳಿ


ಉಡುಪಿ ಸಮೀಪದ ಅಲೆವೂರು ಗ್ರಾಮದ 3-4 ಬಾಳೆ ಹಣ್ಣು ದಾಸ್ತಾನು ಕೇಂದ್ರಗಳಿಗೆ ಏಕಕಾಲದಲ್ಲಿ ಧಿಡೀರ್ ದಾಳಿ ನಡೆಸಲಾಗಿದೆ.



ಅಸಿಸ್ಟೆಂಟ್ ಕಮಿಷರ್ ರಶ್ಮಿ ಎಸ್ ಆರ್ ಹಾಗೂ ಆರೋಗ್ಯ ಅಧಿಕಾರಿಗಳು ದಾಳಿ ನಡೆಸಿ ಬಾಳೆ ಹಣ್ಣಿಗೆ ಹಾನಿಕಾರಕ ರಾಸಾಯನಿಕ ಬಳಸುತ್ತಿದ್ದ ಹಲವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.



ಗುರುವಾರ ಮಂಜಾನೆ ಕೆಮ್ತೂರು ಹಾಗೂ ಮಣಿಪಾಲ ಸಮೀಪದ ದುಗ್ಲಿ ಪರಿಸರದಲ್ಲಿ ಬಾಳೆ ಹಣ್ಣು ರಖಂ ವ್ಯಾಪಾರಸ್ಥರು ಹಾಗೂ ದಾಸ್ತಾನುದಾರರ ಗೋದಾಮುಗಳಿಗೆ ದಾಳಿ ನಡೆಸಿದ ಅಧಿಕಾರಿಗಳು, ಬಾಳೆ ಹಣ್ಣಿಗೆ ಬಳಸುತ್ತಿದ್ದ, ಆರೋಗ್ಯಕ್ಕೆ ಹಾನಿಕಾರಕ ರಾಸಾಯನಿಕಗಳು, ಕೃತಕ ಬಣ್ಣ ನೀಡುವ ರಾಸಾಯನಿಕಗಳು, ಅದನ್ನು ಬಳಸಲು ಉಪಯೋಗಿಸುವ ಪರಿಕರಗಳನ್ನು ವಶಪಡಿಸಿಕೊಂಡು, ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೃತ್ಯಕ್ಕೆ ಬಳಸುತ್ತಿದ್ದ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. 

ಈ ಸಂಬಂಧ ಬಾಳೆಹಣ್ಣು ಸಾಗಾಟಕ್ಕೆ ಅಕ್ರಮವಾಗಿ ಬಳಸುತ್ತಿದ್ದ ಕೆಲವು ಗೂಡ್ಸ್ ಟೆಂಪೊಗಳನ್ನೂ ವಶಪಡಿಸಿಕೊಳ್ಳಲಾಗಿದೆ. 


 

Ads on article

Advertise in articles 1

advertising articles 2

Advertise under the article