ಉಸ್ತುವಾರಿ ಸಚಿವರ ನೇಮಕ: ಉಡುಪಿಗೆ ರಿಜ್ವಾನ್, ದಕ್ಷಿಣ ಕನ್ನಡಕ್ಕೆ ಖಾದರ್ .
Friday, August 14, 2026
ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರುಗಳನ್ನು ನೇಮಿಸಿ ಸರಕಾರ ಆದೇಶ ಹೊರಡಸಿದೆ. ರಾಜ್ಯಪಾಲರ ಆದೇಶಾನುಸಾರ, ಮುಖ್ಯಮಂತ್ರಿಗಳಿಂದ ಅನುಮೋದಿಸಲ್ಪಟ್ಟು, ಸರಕಾರದ ಅಧೀನ ಕಾರ್ಯದರ್ಶಿಯವರು ಪ್ರಕಟಿಸಿದ ಪಟ್ಟಿಯಂತೆ ಉಡುಪಿಗೆ ರಿಜ್ವಾನ್ ಅರ್ಷದ್, ದಕ್ಷಿಣ ಕನ್ನಡಕ್ಕೆ ಯು.ಟಿ. ಖಾದರ್, ಬೆಂಗಳೂರು ನಗರಕ್ಕೆ ಕೃಷ್ಣಬೈರೇಗೌಡ, ಚಿಕ್ಕಮಗಳೂರಿಗೆ ಕೆ.ಜೆ. ಜಾರ್ಜ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.
ತುಮಕೂರಿಗೆ ಜಿ. ಪರಮೇಶ್ವರ್, ಶಿವಮೊಗ್ಗಕ್ಕೆ ಮಧು ಬಂಗಾರಪ್ಪ, ಮಂಡ್ಯಕ್ಕೆ ಎನ್. ಚೆಲುವರಾಯಸ್ವಾಮಿ, ಉತ್ತರ ಕನ್ನಡಕ್ಕೆ ಲಕ್ಷ್ಮಣ ಸವದಿ, ಬಳ್ಳಾರಿಗೆ ಬಿ. ನಾಗೇಂದ್ರ, ಕೊಡಗು ಜಿಲ್ಲೆಗೆ ನರೇಂದ್ರಸ್ವಾಮಿ ಅವರನ್ನು ಉಸ್ತುವಾರಿ ಸಚಿವರುಗಳನ್ನಾಗಿ ನೇಮಕ ಮಾಡಲಾಗಿದೆ.