ಹಿರಿಯ ನ್ಯಾಯವಾದಿ ಜಿ.ಕೆ. ಪರಮೇಶ್ವರ ಜೋಯಿಸ್ ನಿಧನ
Saturday, August 15, 2026
ಹಿರಿಯ ವಕೀಲರಾದ ವಿಟ್ಲ ನಿವಾಸಿ ಜಿ.ಕೆ. ಪರಮೇಶ್ವರ ಜೋಯಿಸ್ ಅವರು ಹೃದಯಾಘಾತದಿಂದ ಶನಿವಾರ ನಿಧನರಾದರು.
ಅವರು ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ಗೌರಿಮೂಲೆಯಲ್ಲಿರುವ ನಿವಾಸದಲ್ಲಿ ಇಂದು ಮಧ್ಯಾಹ್ನ 1.52ಕ್ಕೆ ಕೊನೆಯುಸಿರೆಳೆದರು. ಅವರ ನಿಧನಕ್ಕೆ ಕುಟುಂಬಸ್ಥರು, ಬಂಧು-ಮಿತ್ರರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಪರಮೇಶ್ವರ್ ಅವರ ಅಂತ್ಯಕ್ರಿಯೆ ಇಂದು ಸಂಜೆ 6 ಗಂಟೆಯ ನಂತರ ಗೌರಿಮೂಲೆಯಲ್ಲಿರುವ ಅವರ ಮನೆಯಲ್ಲೇ ನಡೆಯಲಿದೆ.