-->
ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಅದಮಾರು ಶ್ರೀಗಳಿಂದ ಧ್ವಜಾರೋಹಣ

ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ ಅದಮಾರು ಶ್ರೀಗಳಿಂದ ಧ್ವಜಾರೋಹಣ


80ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಕುಂಜಾರುಗಿರಿ ಶ್ರೀದುರ್ಗಾದೇವಿ ದೇವಸ್ಥಾನದಲ್ಲಿ  ಶ್ರೀ ಅದಮಾರು ಮಠಾಧೀಶರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಧ್ವಜಾರೋಹಣ ನೆರವೇರಿಸಿದರು. 


ಸ್ವಾತಂತ್ರ್ಯವನ್ನು ಉಳಿಸಿ ಬಲಿಷ್ಠ ಭಾರತವನ್ನು ಕಟ್ಟುವಲ್ಲಿ ಎಲ್ಲರೂ ದೇಶಾಭಿಮಾನವಿರುವ ರಾಷ್ಟ್ರಭಕ್ತರಾಗಬೇಕು ಎಂದು ಕರೆ ನೀಡಿದರು. 


ಈ ಸಂದರ್ಭದಲ್ಲಿ ದೇವಳದ ತಂತ್ರಿಗಳಾದ ಪುತ್ತೂರು ಶ್ರೀನಿವಾಸ ತಂತ್ರಿ, ಖ್ಯಾತ ವಕೀಲರಾದ ರಾಮಚಂದ್ರ ಅಡಿಗ, ಅರ್ಚಕರಾದ ಗೋಪಾಲಕೃಷ್ಣ ಭಟ್, ದೇವಸ್ಥಾನದ ಅಧಿಕಾರಿಗಳಾದ ನಾಗರಾಜ ರಾವ್, ಮಾಜಿ ಪಂಚಾಯತ್ ಸದಸ್ಯರಾದ ಸುದರ್ಶನ್ ರಾವ್ ಮೊದಲಾದವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article