-->
ಕಥೋಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ

ಕಥೋಲಿಕ್ ಸಭಾ ಉಡುಪಿ ಧರ್ಮಪ್ರಾಂತ್ಯ ನೂತನ ಆಧ್ಯಾತ್ಮಿಕ ನಿರ್ದೇಶಕರಿಗೆ ವಿವಿಧ ಸಂಘಟನೆಗಳಿಂದ ಸನ್ಮಾನ


ಉದ್ಯಾವರ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ಅನಿಲ್ ಡಿಸೋಜಾ ಅವರು ಉಡುಪಿ ಧರ್ಮ ಪ್ರಾಂತ್ಯದ ಕಥೋಲಿಕ್ ಸಭಾ ಕೇಂದ್ರೀಯ ಸಮಿತಿಯ ಆಧ್ಯಾತ್ಮಿಕ ನಿರ್ದೇಶಕರಾಗಿ ನೇಮಕಗೊಂಡ ಹಿನ್ನೆಲೆಯಲ್ಲಿ, ವಿವಿಧ ಸಂಘಟನೆಗಳು ಅವರನ್ನು ಸನ್ಮಾನಿಸಿ, ಅಭಿನಂದಿಸಿದೆ.

ಇತ್ತೀಚಿಗೆ ಮುಕ್ತಾಯ ಕಂಡ ನಿರಂತರ್ ಉದ್ಯಾವರ ನೇತೃತ್ವದ ನಿರಂತರ ಬಹುಭಾಷಾ ಸಿನಿಮಾ ಉತ್ಸವದ ಕೊನೆಯ ದಿನ  ಅನಿಲ್ ಡಿಸೋಜಾ ರವರಿಗೆ ನಿರಂತರ್ ಉದ್ಯಾವರ ಸಂಘಟನೆಯ ವತಿಯಿಂದ ಉನ್ನತ ಹುದ್ದೆ ಸ್ವೀಕರಿಸಿದ ಹಿನ್ನೆಲೆಯಲ್ಲಿ ಅಭಿನಂದಿಸಿ ಸನ್ಮಾನಿಸಿದೆ. ಈ ಸಂದರ್ಭದಲ್ಲಿ  ದಾಯ್ಜಿ ವರ್ಲ್ಡ್ ಮಾಧ್ಯಮದ ಮುಖ್ಯಸ್ಥ ವಾಲ್ಟರ್ ನಂದಳಿಕೆ, ಸಿನಿಮಾ ನಿರ್ದೇಶಕ ಸ್ಟ್ಯಾನಿ ಬೆಳಾ, ನಿರಂತರ್ ಅಧ್ಯಕ್ಷ ರೋಷನ್ ಕ್ರಾಸ್ಟೊ, ಪ್ರಮುಖರಾದ ಮೈಕಲ್ ಡಿಸೋಜ ಸ್ಟೀವನ್ ಕುಲಾಸೊ ಮತ್ತಿತರರು ಉಪಸ್ಥಿತರಿದ್ದರು.


ಕಥೋಲಿಕ್ ಸಭಾ ಉದ್ಯಾವರ ಘಟಕವು ತನ್ನ ಮಾಸಿಕ ಸಭೆಯಲ್ಲಿ ಅನಿಲ್ ಡಿಸೋಜಾ ರವರನ್ನು ಅಭಿನಂದಿಸಿ, ಸನ್ಮಾನಿಸಿದೆ. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಆಧ್ಯಾತ್ಮಿಕ ನಿರ್ದೇಶಕರು, ಕಥೋಲಿಕ್ ಸಭಾ ಸಂಘಟನೆಯನ್ನು ಬಲಿಷ್ಠ ಗೊಳಿಸುವಲ್ಲಿ ಎಲ್ಲರೂ ಜೊತೆಯಾಗಿ ಸಹಕರಿಸೋಣ ಎಂದರು.

ಈ ಸಂದರ್ಭದಲ್ಲಿ ಕೇಂದ್ರೀಯ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರೊನಾಲ್ಡ್ ಅಲ್ಮೆಡ, ಮಾಜಿ ಅಧ್ಯಕ್ಷ ಮೇರಿ ಡಿಸೋಜಾ, ಕಥೋಲಿಕ್ ಸಭಾ ಉದ್ಯಾವರ ಘಟಕದ ಅಧ್ಯಕ್ಷ ಸ್ಟೀವನ್ ಲುವಿಸ್, ಕಾರ್ಯದರ್ಶಿ ಉಷಾ ಲವೀನಾ ಲೋಬೊ, ನಿಯೋಜಿತ ಅಧ್ಯಕ್ಷ ರೋಯ್ಸ್ ಫೆರ್ನಾಂಡಿಸ್, ನಿಕಟಪೂರ್ವ ಅಧ್ಯಕ್ಷೆ ಐರಿನ್ ಪಿರೇರಾ ಮತ್ತಿತರರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article