ಅ. 17ರಂದು ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುವ ಘಟಕ ನೇತೃತ್ವದಲ್ಲಿ ಉಡುಪಿ ದಾಂಡಿಯಾ 2026
Monday, September 28, 2026
ಉಡುಪಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಯುವ ಘಟಕದ ನೇತೃತ್ವದಲ್ಲಿ ಅ. 17ರಂದು ಶನಿವಾರ ಸಾಯಂಕಾಲ 6ಗಂಟೆಯಿಂದ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆ ಮೈದಾನದಲ್ಲಿ ನಡೆಯಲಿರುವ 9ನೇ ವರ್ಷದ ಉಡುಪಿ ದಾಂಡಿಯಾದ ಪೋಸ್ಟರನ್ನು ಉಡುಪಿ ಶಾಸಕ ಯಶಪಾಲ ಎ ಸುವರ್ಣ ಅವರು ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ. ವಸಂತ್ ಭಟ್, ಪ್ರಧಾನ ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ವಜ್ರಮಹೋತ್ಸವ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಿರೀಶ್ ಎಂ ಅಂಚನ್, ಸಮಿತಿಯ ಕೋಶಾಧಿಕಾರಿ ಎಂ ವಲ್ಲಭ ಭಟ್,ವಜ್ರಮಹೋತ್ಸವ ಸಮಿತಿಯ ಕೋಶಾಧಿಕಾರಿ ಮಂಜುನಾಥ್ ಹೆಬ್ಬಾರ್, ಯುವ ಘಟಕದ ಗೌರವಾಧ್ಯಕ್ಷರಾದ ಅಶ್ವತ್ಥ್ ದೇವಾಡಿಗ, ಪ್ರಧಾನ ಕಾರ್ಯದರ್ಶಿ ಶೇಯಸ್ ದೇವಾಡಿಗ ಉಪಸ್ಥಿತರಿದ್ದರು.
ಉಡುಪಿ ದಾಂಡಿಯಾದಲ್ಲಿ ವಿಶೇಷವಾದ ತಿಂಡಿ ತಿನಿಸುಗಳ ಆಹಾರ ಮಳಿಗೆ, ಸೆಲ್ಫಿ ಪಾಯಿಂಟ್ ಇರಲಿದೆ. ಇದರ ಉದ್ಘಾಟನೆಯನ್ನು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ವಿಜೇತೆ ರೂಪಶ್ರೀ ವರ್ಕಾಡಿ ಉದ್ಘಾಟಿಸಲಿದ್ದಾರೆ ಎಂದು ಯುವ ಘಟಕದ ಅಧ್ಯಕ್ಷರಾದ ಪ್ರದೀಪ್ ಶೆಟ್ಟಿ ತಿಳಿಸಿರುತ್ತಾರೆ.
