-->
 ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಟ್ಯಾಂಕರ್, 2 ಲಾರಿಗಳಿಗೆ ಹಾನಿ

ನೆಲ್ಯಾಡಿಯಲ್ಲಿ ಸರಣಿ ಅಪಘಾತ: ಟ್ಯಾಂಕರ್, 2 ಲಾರಿಗಳಿಗೆ ಹಾನಿ


ಕಡಬ ತಾಲೂಕಿನ ನೆಲ್ಯಾಡಿಯಲ್ಲಿ ಸರಣಿ ಅಪಘಾತ ಸಂಭವಿಸಿ ಟ್ಯಾಂಕರ್ ಹಾಗೂ ಎರಡು ಲಾರಿಗಳು ಜಖಂಗೊಂಡ ಘಟನೆ ನಡೆದಿದೆ.

ಸಕಲೇಶಪುರದಿಂದ ಮಂಗಳೂರಿನತ್ತ ಶಮೀರ್ ಎಂಬಾತ ಚಲಾಯಿಸುತ್ತಿದ್ದ ಲಾರಿ, ನೆಲ್ಯಾಡಿ ಬಳಿ ಮುಂದೆ ಸಾಗುತ್ತಿದ್ದ ಮದ್ಯ ಸಾಗಿಸುತ್ತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಡಿಕ್ಕಿಯ ರಭಸಕ್ಕೆ ಮದ್ಯ ಸಾಗಿಸುತ್ತಿದ್ದ ಲಾರಿ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಗ್ಯಾಸ್ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಬಳಿಕ ಪಲ್ಟಿಯಾಗಿದೆ.

ಅಪಘಾತದಲ್ಲಿ ಮದ್ಯ ಸಾಗಿಸುತ್ತಿದ್ದ ಲಾರಿ ಸೇರಿದಂತೆ ಮೂರು ವಾಹನಗಳಿಗೆ ಹಾನಿಯಾಗಿದ್ದು, ಲಾರಿಯಲ್ಲಿದ್ದ ಮದ್ಯದ ಸರಕು ಕೂಡ ಹಾನಿಗೊಳಗಾಗಿದೆ. ಲಾರಿ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

ಮದ್ಯ ಸಾಗಿಸುತ್ತಿದ್ದ ಲಾರಿಯ ಮಾಲೀಕರು ನೆಲಮಂಗಲ ನಿವಾಸಿ ರಾಜಾ ಎಂ. ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ನೆಲ್ಯಾಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಮಾಲೀಕ ರಾಜಾ ಎಂ. ನೀಡಿದ ದೂರಿನ ಆಧಾರದ ಮೇಲೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Ads on article

Advertise in articles 1

advertising articles 2

Advertise under the article