-->
AI ಯುಗದ ಯುವಕನ ಕಥೆ ‘ಲಂಬೋದರ 2.0’: ಬೆಳ್ಳಿತೆರೆಗೆ ಜಿಯಾ ರೋಬೋಟ್ ಎಂಟ್ರಿ

AI ಯುಗದ ಯುವಕನ ಕಥೆ ‘ಲಂಬೋದರ 2.0’: ಬೆಳ್ಳಿತೆರೆಗೆ ಜಿಯಾ ರೋಬೋಟ್ ಎಂಟ್ರಿ


ನಿರ್ದೇಶಕ ಸಿಂಪಲ್ ಸುನಿ ಸಾರಥ್ಯದಲ್ಲಿ ಮೂಡಿಬರುತ್ತಿರುವ ‘ಲಂಬೋದರ 2.0’ ಚಿತ್ರ ಹೊಸತನದ ಕಥಾಹಂದರದೊಂದಿಗೆ ಗಮನ ಸೆಳೆಯುತ್ತಿದೆ. ವಿಶೇಷವೆಂದರೆ, ಬೆಂಗಳೂರಿನ ಮಚಾನಿ ರೋಬೋಟಿಕ್ಸ್ ಅಭಿವೃದ್ಧಿಪಡಿಸಿರುವ ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದೆ.

ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಸೈನ್ಸ್‌ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರ. ಬೆಂಗಳೂರಿನ ಯುವಕನೊಬ್ಬನ ಬದುಕಿನ ಸುತ್ತ ಕಥೆ ಸಾಗಲಿದ್ದು, ಆತನ ಜೀವನದಲ್ಲಿ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ ಹೇಗೆ ಪ್ರವೇಶಿಸುತ್ತದೆ ಎಂಬುದನ್ನು ಸಿನಿಮಾ ಅನಾವರಣಗೊಳಿಸಲಿದೆ.

ಸಾಮಾಜಿಕ ಜಾಲತಾಣಗಳ ಅತಿಯಾದ ಬಳಕೆ, ಡಿಜಿಟಲ್ ವ್ಯಸನ, ಒಂಟಿತನ ಹಾಗೂ ಸಂತೋಷದ ಭ್ರಮೆಯ ನಡುವೆ ಯುವಕನ ನೈಜ ಬದುಕು ಮತ್ತು ಡಿಜಿಟಲ್ ಜಗತ್ತು ಮುಖಾಮುಖಿಯಾಗುತ್ತವೆ. ತಂತ್ರಜ್ಞಾನವು ಮನುಷ್ಯನ ಭಾವನೆ, ಸಂಬಂಧಗಳು ಹಾಗೂ ನಿರ್ಧಾರಗಳ ಮೇಲೆ ಪ್ರಭಾವ ಬೀರುವ ಸಂದರ್ಭಗಳು ಕಥೆಯಲ್ಲಿ ಪ್ರಮುಖ ತಿರುವುಗಳನ್ನು ನೀಡಲಿವೆ.

ಈ ಕಥೆಯಲ್ಲಿ ‘ಜಿಯಾ’ ಎಂಬ ನೈಜ ಹ್ಯೂಮನಾಯ್ಡ್ ರೋಬೋಟ್ ಪ್ರಮುಖ ಪಾತ್ರ ವಹಿಸುತ್ತಿದೆ. ಮನುಷ್ಯರೊಂದಿಗೆ ಸಂವಹನ ನಡೆಸುವ ಜಿಯಾ ಕಥೆಯ ಬೆಳವಣಿಗೆಯಲ್ಲಿ ಹೇಗೆ ಮಹತ್ವದ ಪಾತ್ರವಾಗುತ್ತದೆ ಎಂಬುದು ಚಿತ್ರದ ಕುತೂಹಲಕಾರಿ ಅಂಶವಾಗಿದೆ. ಅನಿಲ್ ಶೆಟ್ಟಿ ನಾಯಕನಾಗಿ, ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸಿದ್ದು, ಕುನಾಲ್ ಕಪೂರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ನೈಜ ಜೀವನ ಮತ್ತು ಡಿಜಿಟಲ್ ಲೋಕದ ನಡುವಿನ ಸಂಘರ್ಷವನ್ನು ವಿಭಿನ್ನ ರೀತಿಯಲ್ಲಿ ಕಟ್ಟಿಕೊಡುತ್ತಿರುವ ‘ಲಂಬೋದರ 2.0’ ಹೊಸ ತಂತ್ರಜ್ಞಾನ ಮತ್ತು ಕಥಾಹಂದರದಿಂದ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದೆ.

ಸೈನ್ಸ್-ಫಿಕ್ಷನ್ ಹಾಗೂ ಸೋಶಿಯಲ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಚಿತ್ರದಲ್ಲಿ ಅನಿಲ್ ಶೆಟ್ಟಿ ನಾಯಕನಾಗಿ, ಸಾಚಿ ಬಿಂದ್ರಾ ನಾಯಕಿಯಾಗಿ ನಟಿಸಿದ್ದಾರೆ. ಬಾಲಿವುಡ್ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

Ads on article

Advertise in articles 1

advertising articles 2

Advertise under the article