-->
ಉಡುಪಿ ಕೇರಳ ಸಮಾಜಂ ವತಿಯಿಂದ ಓಣಂ ಆಚರಣೆ

ಉಡುಪಿ ಕೇರಳ ಸಮಾಜಂ ವತಿಯಿಂದ ಓಣಂ ಆಚರಣೆ


ಕೇರಳ ಸಮಾಜಂ ಉಡುಪಿ ವತಿಯಿಂದ ದ್ವಿತೀಯ ವರ್ಷದ ಓಣಂ ಸಂಭ್ರಮಾಚರಣೆಯನ್ನು ಇಂದು ಉಡುಪಿಯ ಅಂಬಾಗಿಲು ಬಳಿಯಿರುವ ಅಮೃತ್ ಗಾರ್ಡನ್ ಸಭಾಭವನದಲ್ಲಿ ಆಯೋಜಿಸಲಾಗಿತ್ತು. 


ಕಾರ್ಯಕ್ರಮವನ್ನು ಮಲಯಾಳಂ ಚಲನಚಿತ್ರ ನಟಿ ನೀನಾ ಕುರುಪ್ ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್‌ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 


ಕೇರಳ ಸಮಾಜದ ಅಧ್ಯಕ್ಷರಾದ ಅರುಣ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ಟ್ರಷ್ಟಿ ಡಾ. ಅಭಿಲಾಷ್, ಬಾಲ ಕಲಾವಿದೆ ರಾನಿಯ ರಫೀಕ್ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.

Ads on article

Advertise in articles 1

advertising articles 2

Advertise under the article