-->
ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ

ಕೊಡವೂರು ಶ್ರೀ ಶಂಕರನಾರಾಯಣ ದೇವಳದಲ್ಲಿ ತಾಂಬೂಲ ಪ್ರಶ್ನೆ ಚಿಂತನೆ


ಮಹತೋಬಾರ ಕೊಡವೂರು ಶ್ರೀ ಶಂಕರನಾರಾಯಣ ದೇವಸ್ಥಾನದಲ್ಲಿ ಜನವರಿ 20ರಂದು ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ಶ್ರೀದೇವಳದಲ್ಲಿ ನಡೆಯಲಿರುವ ದುರಸ್ತಿ ಕಾರ್ಯಗಳು, ಪ್ರಾಯಶ್ಚಿತ ಕೆಲಸಗಳ ಸಲುವಾಗಿ ತಾಂಬೂಲ ಪ್ರಶ್ನೆ ಚಿಂತನೆ ಇಡಲಾಯಿತು.

ವಿದ್ವಾನ್ ಗೋಪಾಲ ಜೋಯಿಸರು, ದೇವಳದ ತಂತ್ರಿಗಳಾದ ಪುತ್ತೂರು ಹಯವದನ ತಂತ್ರಿ ಹಾಗು ಪುತ್ತೂರು ವಾದಿರಾಜ ತಂತ್ರಿ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆಯನ್ನು ನೆರವೇರಿಸಿದರು. ಪ್ರಾರಂಭದಿಂದ ಕೊನೆಯತನಕವು ಒಳ್ಳೆಯ ರಾಶಿ ಮೂಲಕ ಆಡಳಿತ ಮಂಡಳಿ ಕಾರ್ಯಗತ ಗೊಳಿಸುತ್ತಿರುವ ಕಾಮಗಾರಿಗಳಿಗೆ ದೇವರ ಅಪ್ಪಣೆ ಸಿಕ್ಕಿತು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್ ಜಿ. ಕೊಡವೂರು, ತೊಟ್ಟಂ ಮಧುಸೂದನ ತಂತ್ರಿ, ಪವಿತ್ರಪಾಣಿ ಜನಾರ್ದನ್ ಕೊಡವೂರು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ ಆಚಾರ್ಯ, ವಾದಿರಾಜ ಸಾಲ್ಯಾನ್, ಭಾಸ್ಕರ್ ಪಾಲನ್, ಕೆ. ಬಾಬ, ಉಷಾ ಆನಂದ ಸುವರ್ಣ, ಶೀಲಾ ದೇವಾಡಿಗ, ಚಂದನ್ ಭಟ್, ಭಕ್ತವೃಂದ ಕಾರ್ಯದರ್ಶಿ ರಾಮ ಸೇರಿಗಾರ್, ಭಗವತಿ ಮಾರಿ ಅಮ್ಮ ಕಟ್ಟದಬಡ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಟಿ., ಶಿವಪ್ಪ ಕಾಂಚನ್, ವಾಸುದೇವ ಉಪಾಧ್ಯ ಮೊದಲಾದವರು ಉಪಸ್ಥಿತರಿದ್ದರು.

Ads on article

Advertise in articles 1

advertising articles 2

Advertise under the article