ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ್ ಕೊಡವೂರು ನೇಮಕ
Monday, September 14, 2026
ಇತಿಹಾಸ ಪ್ರಸಿದ್ಧ ಮಹತೊಬಾರ ಕೊಡವೂರು ಶ್ರೀ ಶಂಕರ ನಾರಾಯಣ ದೇವಸ್ಥಾನದ ಪವಿತ್ರಪಾಣಿಯಾಗಿ ಜನಾರ್ದನ್ ಕೊಡವೂರು ಅವರನ್ನು ವ್ಯವಸ್ಥಾಪನ ಸಮಿತಿಯವರು ಆಯ್ಕೆ ಮಾಡಿ ನೇಮಕ ಮಾಡಿದ್ದಾರೆ.
ಈ ಹಿಂದೆ ಇದ್ದ ಕೆ. ಗೋವಿಂದ ಐತಾಳ್ ಅವರು ಸ್ವಯಂ ನಿವೃತ್ತಿ ಘೋಷಿಸಿದ ಕಾರಣ, ಆ ಹುದ್ದೆಗೆ ಜನಾರ್ದನ್ ಕೊಡವೂರು ಅವರನ್ನು ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.