-->
ಮುಂಬೈ ವಾಶಿಯ ಪುತ್ತಿಗೆ ಶಾಖಾ ಮಠದಲ್ಲಿ ವೆಂಕಟಕೃಷ್ಣ ದೇವರ ಪ್ರತಿಷ್ಠಾ ಮಹೋತ್ಸವ

ಮುಂಬೈ ವಾಶಿಯ ಪುತ್ತಿಗೆ ಶಾಖಾ ಮಠದಲ್ಲಿ ವೆಂಕಟಕೃಷ್ಣ ದೇವರ ಪ್ರತಿಷ್ಠಾ ಮಹೋತ್ಸವ


ನವಿ ಮುಂಬೈನ ವಾಶಿಯಲ್ಲಿರುವ ಪುತ್ತಿಗೆ ಮಠದ ಶಾಖಾ ಮಠದಲ್ಲಿ ವೆಂಕಟಕೃಷ್ಣ ದೇವರ ಪ್ರತಿಷ್ಠಾ ಮಹೋತ್ಸವವು ಅತ್ಯಂತ ವೈಭವ ಹಾಗೂ ಭಕ್ತಿಭಾವದಿಂದ ನೆರವೇರಿತು.


ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ವಾಸ್ತು ಪೂಜೆ, ಪ್ರತಿಷ್ಠಾ ಹೋಮ ಸೇರಿದಂತೆ ವಿವಿಧ ಧಾರ್ಮಿಕ ವಿಧಿ-ವಿಧಾನಗಳು ಜರುಗಿದವು. ಬಳಿಕ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ವೆಂಕಟಕೃಷ್ಣ ದೇವರಿಗೆ ಪ್ರಾಣ ಪ್ರತಿಷ್ಠೆ ನೆರವೇರಿಸಿದರು.


ನಂತರ ದೇವರಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿ, ಸುಮುಹೂರ್ತದಲ್ಲಿ ದೇವರ ಪ್ರತಿಷ್ಠಾ ಮಹೋತ್ಸವವನ್ನು ಶ್ರೀಪಾದರು ನೆರವೇರಿಸಿದರು. ಬಳಿಕ ವಿಷ್ಣು ಸಹಸ್ರನಾಮ ಪಾರಾಯಣದೊಂದಿಗೆ ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿದ್ದು, ಮಹಾಪೂಜೆ ನಡೆಯಿತು.

ಪ್ರತಿಷ್ಠಾ ಮಹೋತ್ಸವದಲ್ಲಿ ಅಪಾರ ಸಂಖ್ಯೆಯ ಭಕ್ತರು ಪಾಲ್ಗೊಂಡು ಶ್ರೀ ವೆಂಕಟಕೃಷ್ಣ ದೇವರ ದರ್ಶನ ಪಡೆದು ಧನ್ಯತಾಭಾವ ಹೊಂದಿದರು. ಸಂಪೂರ್ಣ ಕಾರ್ಯಕ್ರಮವು ಭಕ್ತಿ, ಶ್ರದ್ಧೆ ಹಾಗೂ ಧಾರ್ಮಿಕ ವಾತಾವರಣದಲ್ಲಿ ನೆರವೇರಿತು.

Ads on article

Advertise in articles 1

advertising articles 2

Advertise under the article