-->
 ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಆಟೊ ಪ್ರಯಾಣ ದರ ಹೆಚ್ಚಳ

ದ.ಕ. ಜಿಲ್ಲೆಯಲ್ಲಿ ಇಂದಿನಿಂದ ಆಟೊ ಪ್ರಯಾಣ ದರ ಹೆಚ್ಚಳ


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಟೊ ರಿಕ್ಷಾ ಪ್ರಯಾಣ ದರ ಪರಿಷ್ಕರಿಸಿ, ಇಂದಿನಿಂದ ಜಾರಿಗೆ ಬರುವಂತೆ ಜಿಲ್ಲಾ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಆದೇಶ ಹೊರಡಿಸಿದ್ದಾರೆ.

ನೂತನ ದರದಂತೆ ಮೊದಲ 1.5 ಕಿ.ಮೀ.ಗೆ 40 ರೂ. ಹಾಗೂ ಬಳಿಕ ಪ್ರತಿ ಕಿ.ಮೀ.ಗೆ 20 ರೂ. ನಿಗದಿಪಡಿಸಲಾಗಿದೆ. ಮೊದಲ 10 ನಿಮಿಷ ಕಾಯುವಿಕೆ ಉಚಿತ, ಬಳಿಕ ಪ್ರತಿ 15 ನಿಮಿಷಕ್ಕೆ 5 ರೂ. ಶುಲ್ಕ ವಿಧಿಸಬಹುದು. ಆಟೊದಲ್ಲಿ ಗರಿಷ್ಠ 3 ಮಂದಿ ಪ್ರಯಾಣಿಸಲು ಅವಕಾಶವಿದೆ.

ಲಗೇಜ್‌ಗೆ ಮೊದಲ 20 ಕೆ.ಜಿ. ಉಚಿತವಾಗಿದ್ದು, ನಂತರ ಪ್ರತಿ 20 ಕೆ.ಜಿ. ಅಥವಾ ಅದರ ಭಾಗಕ್ಕೆ 5 ರೂ. ಶುಲ್ಕ ನಿಗದಿಯಾಗಿದೆ. ರಾತ್ರಿ 10ರಿಂದ ಬೆಳಗ್ಗೆ 5ರವರೆಗೆ ಸಾಮಾನ್ಯ ದರದ 1.5 ಪಟ್ಟು ಶುಲ್ಕ ಪಡೆಯಲು ಅವಕಾಶವಿದೆ.

ಪ್ರತಿ ಆಟೊದಲ್ಲಿ ನೂತನ ದರಪಟ್ಟಿ ಪ್ರದರ್ಶಿಸುವುದು ಹಾಗೂ ಮೀಟರ್‌ಗಳನ್ನು ಮರುಪರಿಶೀಲಿಸಿ ಸೀಲ್ ಮಾಡಿಸುವುದು ಕಡ್ಡಾಯವಾಗಿದೆ. ನಿಗದಿತ ದರಕ್ಕಿಂತ ಹೆಚ್ಚಾಗಿ ವಸೂಲಿ ಮಾಡಿದರೆ ದಂಡ, ಪರ್ಮಿಟ್ ಅಮಾನತು ಅಥವಾ ರದ್ದುಪಡಿಸುವಂತಹ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪ್ರಾಧಿಕಾರ ಎಚ್ಚರಿಸಿದೆ.

Ads on article

Advertise in articles 1

advertising articles 2

Advertise under the article