ಉಡುಪಿ ಶ್ರೀಕೃಷ್ಣ ಮಠದಲ್ಲಿ ಗಣೇಶವಿಗ್ರಹ ಪ್ರತಿಷ್ಠೆ, ಮಹಾಪೂಜೆ
Monday, September 14, 2026
ಬಾದ್ರಪದ ಶುಕ್ಲ ಗಣೇಶ ಚತುರ್ಥಿಯ ಪರ್ವಕಾಲದಲ್ಲಿ ಉಡುಪಿ ಶ್ರೀಕೃಷ್ಣ ಮಠದ ಬಡಗುಮಾಳಿಗೆಯಲ್ಲಿ ಗಣೇಶವಿಗ್ರಹವನ್ನು ವಿಧಿವತ್ತಾಗಿ ಪ್ರತಿಷ್ಠಾಪಿಸಲಾಯಿತು.
ಸಾಂಪ್ರದಾಯಿಕವಾಗಿ ಗಣೇಶವಿಗ್ರಹವನ್ನು ರಥಬೀದಿಯಲ್ಲಿ ಮೆರವಣಿಗೆಯ ಮೂಲಕ ತರಲಾಯಿತು. ಬಳಿಕ ಮಠದ ಪುರೋಹಿತರಾದ ಸುದರ್ಶನ ಭಟ್ ಅವರ ನೇತೃತ್ವದಲ್ಲಿ ಶಾಸ್ತ್ರೋಕ್ತ ವಿಧಿವಿಧಾನಗಳೊಂದಿಗೆ ಗಣೇಶವಿಗ್ರಹದ ಪ್ರತಿಷ್ಠಾಪನಾ ಧಾರ್ಮಿಕ ಕಾರ್ಯಕ್ರಮ ನೆರವೇರಿತು.
ಪ್ರತಿಷ್ಠಾಪಿತ ಗಣೇಶವಿಗ್ರಹಕ್ಕೆ ಮಧ್ಯಾಹ್ನ ಪರ್ಯಾಯ ಪೀಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಮಹಾಪೂಜೆ ನೆರವೇರಿತು.
ಈ ಸಂದರ್ಭದಲ್ಲಿ ಪರ್ಯಾಯ ಮಠದ ದಿವಾನ ಡಾ. ಉದಯ ಸರಳತ್ತಾಯ, ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು, ರಾಮಚಂದ್ರ ಕೊಡಂಚ ಸೇರಿದಂತೆ ಹಲವರು ಉಪಸ್ಥಿತರಿದ್ದರು.


