-->
 ಗಣೇಶೋತ್ಸವ ವೇಳೆ ವಂದೇ ಮಾತರಂ ನಿಲ್ಲಿಸಿದ್ದಕ್ಕೆ ಆಕ್ರೋಶ; ಗಾಯನಕ್ಕೆ ಅವಕಾಶ ನೀಡಿದ ಎಸೈ

ಗಣೇಶೋತ್ಸವ ವೇಳೆ ವಂದೇ ಮಾತರಂ ನಿಲ್ಲಿಸಿದ್ದಕ್ಕೆ ಆಕ್ರೋಶ; ಗಾಯನಕ್ಕೆ ಅವಕಾಶ ನೀಡಿದ ಎಸೈ


ಉಪ್ಪಿನಂಗಡಿಯಲ್ಲಿ ಗಣಪತಿ ವಿಸರ್ಜನೆ ವೇಳೆ ವಂದೇ ಮಾತರಂ ಗಾಯನವನ್ನು ಎರಡು ಚರಣಗಳಿಗೆ ಸೀಮಿತಗೊಳಿಸುವಂತೆ ಪೊಲೀಸ್ ಅಧಿಕಾರಿ ಸೂಚಿಸಿದ್ದರಿಂದ ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಯಿತು.  

ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸೇವಾ ಟ್ರಸ್ಟ್ ವತಿಯಿಂದ 50ನೇ ವರ್ಷದ ಗಣೇಶೋತ್ಸವವನ್ನು ಆಚರಿಸಲಾಗಿತ್ತು. ಗಣಪತಿ ಮೂರ್ತಿ ವಿಸರ್ಜನೆಗೂ ಮುನ್ನ ವಂದೇ ಮಾತರಂ ಧ್ವನಿಮುದ್ರಿತ ಗಾಯನವನ್ನು ಮೊಳಗಿಸಲಾಯಿತು. ಈ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯ ಎಸ್‌ಐ ಸುತೇಶ್ ಅವರು ಗಾಯನವನ್ನು ನಿಲ್ಲಿಸಿದ್ದರು ಎನ್ನಲಾಗಿದೆ. ಇದರಿಂದ ಸ್ಥಳದಲ್ಲಿದ್ದ ಭಕ್ತರು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ವಂದೇ ಮಾತರಂ ಗಾಯನವನ್ನು ಪೂರ್ಣವಾಗಿ ಹಾಡಲು ಅವಕಾಶ ನೀಡಬೇಕು ಎಂದು ಭಕ್ತರು ಪಟ್ಟು ಹಿಡಿದರು. ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ಎಸ್‌ಐ ಅವರು ಪೂರ್ಣ ಗಾಯನಕ್ಕೆ ಅವಕಾಶ ನೀಡಿದರು. ವಂದೇ ಮಾತರಂ ಗಾಯನ ಪೂರ್ಣಗೊಂಡ ಬಳಿಕ ಗಣಪತಿ ಮೂರ್ತಿಯ ಜಲಸ್ತಂಭನ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.

Ads on article

Advertise in articles 1

advertising articles 2

Advertise under the article