-->
ಬಾವಿಗೆ ಬಿದ್ದ ನವಿಲಿನ ರಕ್ಷಣೆ: ಅಗ್ನಿಶಾಮಕ ದಳದ ಕಾರ್ಯಾಚರಣೆ

ಬಾವಿಗೆ ಬಿದ್ದ ನವಿಲಿನ ರಕ್ಷಣೆ: ಅಗ್ನಿಶಾಮಕ ದಳದ ಕಾರ್ಯಾಚರಣೆ


ಬಾವಿಗೆ ಬಿದ್ದಿದ್ದ ನವಿಲನ್ನು ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ ಘಟನೆ ಕಟಪಾಡಿಯ ಕೋಟೆ ಸಮೀಪ ಸೋಮವಾರ ಸಂಜೆ ನಡೆದಿದೆ. 


ಕೋಟೆ ಗ್ರಾಮದ ಬಾವಿಯಲ್ಲಿ ನವಿಲೊಂದು ಬಿದ್ದಿರುವ ಕುರಿತು ಮಾಹಿತಿ ಪಡೆದ ಉಡುಪಿ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. 

ಅಗ್ನಿಶಾಮಕ ಸಿಬ್ಬಂದಿ ಮಹಾಬಲೇಶ್ವರ ಎಂಬವರು ಬಾವಿಗೆ ಇಳಿದು, ನವಿಲನ್ನು ಜೀವಂತ ಮೇಲಕ್ಕೆತ್ತಿದ್ದು, ಸಿಬ್ಬಂದಿಗಳಾದ ಅಶ್ವಿನ್ ಸನಿಲ್, ಸುಧೀರ್,  ನಾಗೇಶ್ ಪೂಜಾರಿ, ಅಮರ್ ಮತ್ತು ಗಣೇಶ್ ಈ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡರು. 


Ads on article

Advertise in articles 1

advertising articles 2

Advertise under the article