ಸಸಿಹಿತ್ಲು ತೋಚೋಡಿ ಮನೆತನದ ಶೇಖರ ಪೂಜಾರಿ ದೊಡ್ಡಮನೆ ನಿಧನ
Wednesday, September 09, 2026
ಮೂಲ್ಕಿಯ ಸಸಿಹಿತ್ಲು ತೋಚೋಡಿ ಮನೆತನದ ಶೇಖರ್ ಪೂಜಾರಿ(89) ಇಂದು ನಿಧನರಾಗಿದ್ದಾರೆ.
ಸಸಿಹಿತ್ಲು ಗ್ರಾಮದ ಗುರಿಕಾರರಾಗಿದ್ದ ಶೇಖರ್ ಪೂಜಾರಿ ಅವರು, ಸಸಿಹಿತ್ಲು ಸಾರಂತಾಯ ಗರಡಿಯ ಗೌರವ ಸಲಹೆಗಾರರಾಗಿದ್ದರು. ತೋಚೋಡಿ ಮನೆತನದ ಓಡ್ಯಂತಾಯ ದೈವದ ಪಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದರು.
ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ನಾಲ್ವರು ಪುತ್ರರನ್ನು ಅಗಲಿದ್ದಾರೆ. ಅವರ ನಿಧನಕ್ಕೆ ಸಮಾಜದ ಅನೇಕ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.