-->
 ಮಿಸ್ಟರ್ ಉಚ್ಚಿಲ ದಸರಾ-2026 ದೇಹದಾರ್ಢ್ಯ ಸ್ಪರ್ಧೆ: ವಿಘ್ನೇಶ್ ಚಾಂಪಿಯನ್

ಮಿಸ್ಟರ್ ಉಚ್ಚಿಲ ದಸರಾ-2026 ದೇಹದಾರ್ಢ್ಯ ಸ್ಪರ್ಧೆ: ವಿಘ್ನೇಶ್ ಚಾಂಪಿಯನ್


ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಸ್ಥಾನದಲ್ಲಿ ನಡೆಯುತ್ತಿರುವ ಉಡುಪಿ ಉಚ್ಚಿಲ ದಸರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ ನಡೆದ ರಾಜ್ಯಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಉಡುಪಿ ಜಿಲ್ಲೆಯ ವಿಘ್ನೇಶ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಆ ಮೂಲಕ ಅವರು ಪ್ರತಿಷ್ಠಿತ ‘ಮಿಸ್ಟರ್ ಉಚ್ಚಿಲ ದಸರಾ-2026’ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.


ಚಾಂಪಿಯನ್ ಪಟ್ಟದೊಂದಿಗೆ ವಿಘ್ನೇಶ್ ಅವರು 1,11,111 ನಗದು ಬಹುಮಾನ ಪಡೆದರು. ದಕ್ಷಿಣ ಕನ್ನಡ ಜಿಲ್ಲೆಯ ಧನಂಜಯ್ ರನ್ನರ್‌ಅಪ್ ಆಗಿ ಆಯ್ಕೆಯಾಗಿ 33,333 ಬಹುಮಾನ ತಮ್ಮದಾಗಿಸಿಕೊಂಡರು. ಉತ್ತಮ ಪೋಸರ್ ಪ್ರಶಸ್ತಿಗೆ ಭಾಜನರಾದ ಝಾಕಿರ್ ಹುಲ್ಲೂರು 11,111 ನಗದು ಬಹುಮಾನ ಪಡೆದರು. ಇದೇ ಸಂದರ್ಭದಲ್ಲಿ ಮಂಜುನಾಥ್ ಮೊಗವೀರ ದಾವಣಗೆರೆ ಅವರನ್ನು ಸನ್ಮಾನಿಸಲಾಯಿತು.

ವಿವಿಧ ವಿಭಾಗಗಳ ವಿಜೇತರು

- 55 ಕೆ.ಜಿ. ವಿಭಾಗ: ರಿತಿಕ್ ಕಾಹೆ (ಬೆಳಗಾವಿ) ಪ್ರಥಮ, ಪ್ರತೀಶ್ (ದಕ್ಷಿಣ ಕನ್ನಡ) ದ್ವಿತೀಯ, ಜೀವಂತ್ (ಬೆಂಗಳೂರು) ತೃತೀಯ.

- 60 ಕೆ.ಜಿ. ವಿಭಾಗ: ಶಶಿಧರ ನಾಯಕ್ ಪ್ರಥಮ, ಪ್ರಕಾಶ್ ಕಿಟ್ಟಿ (ಧಾರವಾಡ) ದ್ವಿತೀಯ, ವಿಘ್ನೇಶ್ ಹೆಗ್ಡೆ ತೃತೀಯ.

- 65 ಕೆ.ಜಿ. ವಿಭಾಗ: ಶ್ರೀನಿವಾಸ್ ಖಾರ್ವಿ (ಉಡುಪಿ) ಪ್ರಥಮ, ರಾಜು ಚೌದರಿ (ಧಾರವಾಡ) ದ್ವಿತೀಯ, ಮುರಳೀಧರ ಪಟೇಲ್ (ಶಿವಮೊಗ್ಗ) ತೃತೀಯ.

- 70 ಕೆ.ಜಿ. ವಿಭಾಗ: ವಿಘ್ನೇಶ್ (ಉಡುಪಿ) ಪ್ರಥಮ, ಸುನಿಲ್ ಬಲ್ಕೊಡೆ (ಬೆಳಗಾವಿ) ದ್ವಿತೀಯ, ಪ್ರತಾಪ್ ಕಲ್ಕುಂದ್ರಿಕಾ (ಬೆಳಗಾವಿ) ತೃತೀಯ.

- 75 ಕೆ.ಜಿ. ವಿಭಾಗ: ಧನಂಜಯ್ (ದಕ್ಷಿಣ ಕನ್ನಡ) ಪ್ರಥಮ, ಪ್ರಥಮ್ ಪೂಜಾರಿ (ದಕ್ಷಿಣ ಕನ್ನಡ) ದ್ವಿತೀಯ, ರಾಹುಲ್ ಕುಲಾಲ್ (ಬೆಳಗಾವಿ) ತೃತೀಯ.

- 80 ಕೆ.ಜಿ. ವಿಭಾಗ: ಭರತ್ ಉಪಾಧ್ಯ (ಉತ್ತರ ಕನ್ನಡ) ಪ್ರಥಮ, ಹೇಮಂತ್ ಕುಮಾರ್ ಎ. (ಶಿವಮೊಗ್ಗ) ದ್ವಿತೀಯ, ವಿಷ್ಣುಕಾಂತ್ (ದಕ್ಷಿಣ ಕನ್ನಡ) ತೃತೀಯ.

- 85 ಕೆ.ಜಿ. ವಿಭಾಗ: ಪವನ್ (ಉಡುಪಿ) ಪ್ರಥಮ, ಪ್ರಥ್ವಿನ್ (ಉಡುಪಿ) ದ್ವಿತೀಯ, ಸವಿಯೊ ವಾಸ್ (ದಕ್ಷಿಣ ಕನ್ನಡ) ತೃತೀಯ.

- 85 ಕೆ.ಜಿ. ಮೇಲ್ಪಟ್ಟ ವಿಭಾಗ: ಶ್ರೀವರ್ಧನ್ ರೆಡ್ಡಿ (ವಿಜಯನಗರ) ಪ್ರಥಮ, ಚಿರಾಗ್ ಆರ್. (ಉಡುಪಿ) ದ್ವಿತೀಯ, ಹೌಸ್ಟನ್ ಬಿ. ಬ್ರೀಸಿ (ಉಡುಪಿ) ತೃತೀಯ.

ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘದ ಗೌರವ ಸಲಹೆಗಾರ ಜಿ. ಶಂಕರ್ ಅವರು ಸ್ಪರ್ಧೆಗೆ ಚಾಲನೆ ನೀಡಿದರು. ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಪ್ರಧಾನ ಕಾರ್ಯದರ್ಶಿ ಶರಣ್ ಮಟ್ಟು, ಮೋಹನ್ ಬೇಂಗ್ರೆ, ಆನಂದ ಸಿ. ಕುಂದರ್, ವಿನಯ ಕರ್ಕೇರ, ಕವಿತಾ ಶರತ್, ಸುಗುಣ ಕರ್ಕೇರ, ಸಂಧ್ಯಾದೀಪ ಸುನಿಲ್, ಗಿರಿಧರ ಸುವರ್ಣ, ರತ್ನಾಕರ ಸಾಲ್ಯಾನ್, ಸುಜಿತ್ ಸಾಲ್ಯಾನ್, ವೇದ ಪ್ರಕಾಶ್ ಶ್ರೀಯಾನ್, ರವೀಶ್ ಕೊರವಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. 

Ads on article

Advertise in articles 1

advertising articles 2

Advertise under the article